ಯಾಜಕಕಾಂಡ 25:17

ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

15ಸಂಭ್ರಮದ ತರುವಾಯ ವರುಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರುಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.

16ವರುಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನು ಹೆಚ್ಚಿಸಬೇಕು; ವರುಷಗಳು ಕಡಿಮೆಯಿರುವಂತೆಯೇ ಫಲದ ಬೆಲೆ ಯನ್ನು ಕಡಿಮೆಮಾಡಬೇಕು. ಫಲದ ವರುಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟ ಮಾಡಬೇಕು.

17ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.

18ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.

19ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी