ಧರ್ಮೋಪದೇಶಕಾಂಡ 29:13

ಆ ಒಡಂಬಡಿಕೆ ಯಾವದಂದರೆ, ಆತನು ನಿನಗೆ ಹೇಳಿದಂತೆಯೂ ನಿನ್ನ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದಂತೆಯೂ ಈಹೊತ್ತು ನಿನ್ನನ್ನು ತನಗೆ ಜನಾಂಗವಾಗಿ ಸ್ಥಾಪಿಸಿ ನಿನಗೆ ದೇವರಾಗ ಬೇಕೆಂಬದೇ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 29

11ನಿನ್ನ ದೇವರಾದ ಕರ್ತನು ಈಹೊತ್ತು ನಿನ್ನ ಸಂಗಡ ಮಾಡುವ ಒಡಂಬಡಿಕೆಯ ಲ್ಲಿಯೂ ಆಣೆಯಲ್ಲಿಯೂ ಸೇರುವದಕ್ಕೆ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ಹಿರಿಯರೂ ಅಧಿಕಾರಿಗಳೂ ಇಸ್ರಾಯೇಲಿನ ಮನುಷ್ಯರೆಲ್ಲರೂ

12ನಿಮ್ಮ ಚಿಕ್ಕವರೂ ಪತ್ನಿಯರೂ ನಿನ್ನ ಪಾಳೆಯದಲ್ಲಿರುವ ಪರವಾಸಿಯರೂ ನಿನಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವ ವರೂ ಇದ್ದೀರಿ.

13ಆ ಒಡಂಬಡಿಕೆ ಯಾವದಂದರೆ, ಆತನು ನಿನಗೆ ಹೇಳಿದಂತೆಯೂ ನಿನ್ನ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದಂತೆಯೂ ಈಹೊತ್ತು ನಿನ್ನನ್ನು ತನಗೆ ಜನಾಂಗವಾಗಿ ಸ್ಥಾಪಿಸಿ ನಿನಗೆ ದೇವರಾಗ ಬೇಕೆಂಬದೇ.

14ಇದಲ್ಲದೆ ನಿಮ್ಮ ಸಂಗಡ ಮಾತ್ರ ಈ ಒಡಂಬಡಿಕೆ ಯನ್ನೂ ಈ ಆಣೆಯನ್ನೂ ನಾನು ಮಾಡುವದಿಲ್ಲ;

15ಈಹೊತ್ತು ಇಲ್ಲಿ ನಮ್ಮ ಸಂಗಡ ನಮ್ಮ ದೇವರಾದ ಕರ್ತನ ಮುಂದೆ ನಿಂತವನ ಸಂಗಡವೂ ಈಹೊತ್ತು ಇಲ್ಲಿ ನಮ್ಮ ಸಂಗಡ ಇರದವನ ಸಂಗಡವೂ ಮಾಡು ತ್ತೇನೆ.

ಧರ್ಮೋಪದೇಶಕಾಂಡ 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी