ನೆಬೂಕದ್ನೆಚ್ಚರನೆಂಬ ನಾನು ನನ್ನ ಮನೆಯಲ್ಲಿ ಕ್ಷೇಮವಾಗಿಯೂ ನನ್ನ ಅರಮನೆಯಲ್ಲಿ ಸುಖವಾ ಗಿಯೂ ಇರುವಾಗ;
2ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ.
3ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
4ನೆಬೂಕದ್ನೆಚ್ಚರನೆಂಬ ನಾನು ನನ್ನ ಮನೆಯಲ್ಲಿ ಕ್ಷೇಮವಾಗಿಯೂ ನನ್ನ ಅರಮನೆಯಲ್ಲಿ ಸುಖವಾ ಗಿಯೂ ಇರುವಾಗ;
5ನನ್ನನ್ನು ಭಯಪಡಿಸುವಂತೆ ನಾನು ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಆದ ಯೋಚನೆಗಳು ನನ್ನ ಮನಸ್ಸಿನ ದರ್ಶನ ಗಳು ನನ್ನನ್ನು ಕಳವಳಪಡಿಸಿದವು.
6ಆದದರಿಂದ ನನ್ನ ಕನಸಿನ ಅರ್ಥವನ್ನು ನನಗೆ ತಿಳಿಸುವದಕ್ಕೋಸ್ಕರ ಬಾಬೆಲಿನ ಸಕಲ ಜ್ಞಾನಿಗಳನ್ನು ನನ್ನ ಮುಂದೆ ತರಬೇಕೆಂದು ಆಜ್ಞಾಪಿಸಿದೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ