ಅಪೊಸ್ತಲರ ಕೃತ್ಯಗಳು 24:24

ಕೆಲವು ದಿವಸಗಳಾದ ಮೇಲೆ ಯೆಹೂದ್ಯಳಾದ ದ್ರೂಸಿಲ್ಲಳೆಂಬ ತನ್ನ ಹೆಂಡತಿಯೊಂದಿಗೆ ಫೇಲಿಕ್ಸನು ಬಂದು ಪೌಲನನ್ನು ಕರೆಯಿಸಿ ಕ್ರಿಸ್ತನಲ್ಲಿ ಇಡಬೇಕಾದ ನಂಬಿಕೆಯ ವಿಷಯವಾಗಿ ಅವನು ಹೇಳಿದ್ದನ್ನು ಕೇಳಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 24

22ಆ ಮಾರ್ಗದ ವಿಷಯವಾಗಿ ಚೆನ್ನಾಗಿ ತಿಳಿದು ಕೊಂಡಿದ್ದ ಫೇಲಿಕ್ಸನು ಇವುಗಳನ್ನು ಕೇಳಿ ವಿಷಯವನ್ನು ಮುಂದಕ್ಕೆ ಹಾಕಿಸಿ--ಮುಖ್ಯನಾಯಕನಾದ ಲೂಸ್ಯನು ಬಂದಾಗ ನಿಮ್ಮ ವಿಷಯವನ್ನು ಸಂಪೂರ್ಣವಾಗಿ ವಿಚಾರಣೆ ಮಾಡುತ್ತೇನೆ ಎಂದು ಹೇಳಿದನು.

23ಪೌಲನು ಕಾವಲಲ್ಲಿ ಬಿಡುವಾಗಿದ್ದು ಅವನ ಪರಿ ಚಿತರು ಉಪಚಾರ ಮಾಡುವದಕ್ಕೆ ಅವನ ಬಳಿಗೆ ಬರುವ ಯಾರನ್ನೂ ಅಡ್ಡಿ ಮಾಡಬಾರದೆಂದು ಒಬ್ಬ ಶತಾಧಿಪತಿಗೆ ಅಪ್ಪಣೆ ಕೊಟ್ಟನು.

24ಕೆಲವು ದಿವಸಗಳಾದ ಮೇಲೆ ಯೆಹೂದ್ಯಳಾದ ದ್ರೂಸಿಲ್ಲಳೆಂಬ ತನ್ನ ಹೆಂಡತಿಯೊಂದಿಗೆ ಫೇಲಿಕ್ಸನು ಬಂದು ಪೌಲನನ್ನು ಕರೆಯಿಸಿ ಕ್ರಿಸ್ತನಲ್ಲಿ ಇಡಬೇಕಾದ ನಂಬಿಕೆಯ ವಿಷಯವಾಗಿ ಅವನು ಹೇಳಿದ್ದನ್ನು ಕೇಳಿದನು.

25ಇದಲ್ಲದೆ ನೀತಿ ದಮೆಯ ಮತ್ತು ಮುಂದೆ ಬರುವ ನ್ಯಾಯತೀರ್ಪಿನ ವಿಷಯವಾಗಿ ಅವನು ಪ್ರಸ್ತಾಪಿಸುತ್ತಿದ್ದಾಗ ಫೇಲಿಕ್ಸನು ನಡುಗಿ--ನೀನು ಸದ್ಯಕ್ಕೆ ಹೋಗು; ನನಗೆ ಅನುಕೂಲವಾದ ಸಮಯವು ಇರುವಾಗ ನಿನ್ನನ್ನು ನಾನು ಕರೆಯಿಸುವೆನು ಎಂದು ಉತ್ತರಕೊಟ್ಟನು.

26ಫೇಲಿಕ್ಸನು ಪೌಲನನ್ನು ಬಿಡಿಸುವಂತೆ ಅವನಿಂದ ತನಗೆ ಹಣ ಸಿಕ್ಕೀತೆಂದು ನಿರೀಕ್ಷಿಸಿದ ಕಾರಣ ಪದೇ ಪದೇ ಅವನನ್ನು ಕರೆಯಿಸಿ ಅವನೊಂದಿಗೆ ಸಂಭಾಷಣೆ ಮಾಡುತ್ತಿದ್ದನು.

ಅಪೊಸ್ತಲರ ಕೃತ್ಯಗಳು 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी