ಲೂಕನು 23:36

ಸೈನಿ ಕರು ಸಹ ಆತನ ಬಳಿಗೆ ಬಂದು ಆತನಿಗೆ ಹಾಸ್ಯ ಮಾಡಿ ಹುಳಿರಸವನ್ನು ಕೊಟ್ಟು

ಸಂದರ್ಭದೊಂದಿಗೆ ಓದಿ · ಲೂಕನು 23

34ಆಗ ಯೇಸು--ತಂದೆಯೇ, ಅವರನ್ನು ಕ್ಷಮಿಸು; ಯಾಕಂದರೆ ತಾವು ಏನು ಮಾಡುತ್ತೇವೆಂದು ಅವರು ಅರಿಯರು ಅಂದನು. ಅವರು ಆತನ ಉಡುಪನ್ನು ಪಾಲು ಮಾಡಿ ಚೀಟು ಹಾಕಿದರು.

35ಜನರು ನೋಡುತ್ತಾ ನಿಂತುಕೊಂಡಿ ದ್ದರು. ಆಗ ಅವರೊಂದಿಗೆ ಅಧಿಕಾರಿಗಳು ಸಹ ಆತ ನಿಗೆ ಅಪಹಾಸ್ಯ ಮಾಡಿ--ಈತನು ಬೇರೆಯವರನ್ನು ರಕ್ಷಿಸಿದನು; ಇವನು ದೇವರು ಆರಿಸಿಕೊಂಡ ಕ್ರಿಸ್ತನಾಗಿ ದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಅಂದರು.

36ಸೈನಿ ಕರು ಸಹ ಆತನ ಬಳಿಗೆ ಬಂದು ಆತನಿಗೆ ಹಾಸ್ಯ ಮಾಡಿ ಹುಳಿರಸವನ್ನು ಕೊಟ್ಟು

37ಆತನಿಗೆ--ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ ಅಂದರು.

38ಇದಲ್ಲದೆ ಆತನ ಮೇಲ್ಗಡೆಯಲ್ಲಿ--ಈತನು ಯೆಹೂದ್ಯರ ಅರಸನು ಎಂಬ ಮೇಲ್ಬರಹವು ಸಹ ಗ್ರೀಕ್‌ ಲ್ಯಾಟಿನ್‌ ಮತ್ತು ಇಬ್ರಿಯ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು.

ಲೂಕನು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी