ಅಪೊಸ್ತಲರ ಕೃತ್ಯಗಳು 7:8

ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 7

6ಇದಲ್ಲದೆ ದೇವರು ಈ ರೀತಿ ಹೇಳಿ ದನು--ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿ ಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸ ರನ್ನಾಗಿ ಮಾಡಿಕೊಂಡು ನಾನೂರು ವರುಷಗಳ ತನಕ ಕ್ರೂರವಾಗಿ ನಡಿಸುವರು.

7ಅವರು ದಾಸರಾಗಿ ಸೇವಿ ಸುವ ಜನಾಂಗಕ್ಕೆ ನಾನೇ ನ್ಯಾಯತೀರಿಸುವೆನು ಎಂದು ದೇವರು ಹೇಳಿದನು. ಆಮೇಲೆ ಅವರು ಹೊರಟು ಬಂದು ಈ ಸ್ಥಳದಲ್ಲಿ ನನ್ನನ್ನು ಸೇವಿಸುವರು ಎಂಬದೇ.

8ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.

9ಮೂಲಪಿತೃಗಳು ಹೊಟ್ಟೇಕಿಚ್ಚಿನಿಂದ ಯೋಸೇಫ ನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಟರು. ಆದರೆ ದೇವರು ಅವನ ಸಂಗಡ ಇದ್ದು

10ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತ ದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾ ಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿ ಸಿದನು. ಫರೋಹನು ಅವನನ್ನು ಐಗುಪ್ತ ದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು.

ಅಪೊಸ್ತಲರ ಕೃತ್ಯಗಳು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी