ವಿಮೋಚನಕಾಂಡ 2:15

ಫರೋಹನು ಈ ಮಾತುಗಳನ್ನು ಕೇಳಿ ಮೋಶೆ ಯನ್ನು ಕೊಲ್ಲಲು ಹುಡುಕಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್‌ ದೇಶದಲ್ಲಿದ್ದು ಒಂದು ಬಾವಿಯ ಬಳಿಯಲ್ಲಿ ಕೂತು ಕೊಂಡನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 2

13ಎರಡನೇ ದಿನ ಅವನು ಮತ್ತೆ ಹೊರಗೆ ಹೋದಾಗ ಇಗೋ, ಇಬ್ರಿಯರಾದ ಇಬ್ಬರು ಮನುಷ್ಯರು ಜಗಳವಾಡು ತ್ತಿದ್ದರು. ತಪ್ಪು ಮಾಡಿದವನಿಗೆ ಅವನು--ಯಾಕೆ ನಿನ್ನ ಜೊತೆಯವನನ್ನು ಹೊಡೆಯುತ್ತೀ ಅಂದನು.

14ಅದಕ್ಕ ವನು--ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವ ನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿ ದ್ದಾರೆ? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಆಗ ಮೋಶೆಯು ಭಯಪಟ್ಟು--ನಿಶ್ಚಯವಾಗಿ ಈ ಕಾರ್ಯವು ತಿಳಿದುಬಂತು ಎಂದು ಅಂದುಕೊಂಡನು.

15ಫರೋಹನು ಈ ಮಾತುಗಳನ್ನು ಕೇಳಿ ಮೋಶೆ ಯನ್ನು ಕೊಲ್ಲಲು ಹುಡುಕಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್‌ ದೇಶದಲ್ಲಿದ್ದು ಒಂದು ಬಾವಿಯ ಬಳಿಯಲ್ಲಿ ಕೂತು ಕೊಂಡನು.

16ಮಿದ್ಯಾನಿನ ವೈದಿಕನಿಗೆ ಏಳು ಮಂದಿ ಕುಮಾರ್ತೆಯರಿದ್ದರು. ಇವರು ಬಂದು ತಮ್ಮ ತಂದೆಯ ಮಂದೆಗಳಿಗೆ ನೀರು ಸೇದಿ ದೋಣಿಗಳನ್ನು ತುಂಬಿಸು ತ್ತಿದ್ದರು.

17ಕುರುಬರು ಬಂದು ಅವರನ್ನು ಓಡಿಸುತ್ತಿ ದ್ದಾಗ ಮೋಶೆಯು ಎದ್ದು ಅವರಿಗೆ ಸಹಾಯ ಮಾಡಿ ಅವರ ಕುರಿಗಳಿಗೆ ನೀರು ಕುಡಿಸಿದನು.

ವಿಮೋಚನಕಾಂಡ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी