೧ ಸಮುವೇಲನು 15:3

ಈಗ ನೀನು ಹೋಗಿ ಆ ಅಮಾಲೇಕ್ಯರನ್ನು ಹೊಡೆದು ಅವರಿಗೆ ಇದ್ದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿ ಅವರನ್ನು ಕನಿಕರಿಸದೆ ಪುರುಷರನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಮೊಲೆ ಕೂಸುಗಳನ್ನೂ ದನ ಕುರಿ ಒಂಟೆ ಕತ್ತೆಗಳನ್ನೂ ಕೊಂದುಹಾಕು ಎಂಬದು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 15

1ಸಮುವೇಲನು ಸೌಲನಿಗೆ--ಕರ್ತನು ತನ್ನ ಜನರಾದ ಇಸ್ರಾಯೇಲ್ಯರ ಮೇಲೆ ನಿನ್ನನ್ನು ಅರಸನನ್ನಾಗಿ ಅಭಿಷೇಕಿಸಲು ನನ್ನನ್ನು ಕಳುಹಿಸಿದನು. ಈಗ ನೀನು ಕರ್ತನ ಮಾತುಗಳನ್ನು ಕೇಳು.

2ಸೈನ್ಯ ಗಳ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲ್ಯರು ಐಗುಪ್ತದಿಂದ ಬರುವಾಗ ಅಮಾಲೇಕ್ಯರು ಅವರ ಮಾರ್ಗಕ್ಕೆ ಅಡ್ಡಗಟ್ಟಿದ್ದು ನಾನು ನೆನಸಿಕೊಂಡಿ ದ್ದೇನೆ.

3ಈಗ ನೀನು ಹೋಗಿ ಆ ಅಮಾಲೇಕ್ಯರನ್ನು ಹೊಡೆದು ಅವರಿಗೆ ಇದ್ದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿ ಅವರನ್ನು ಕನಿಕರಿಸದೆ ಪುರುಷರನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಮೊಲೆ ಕೂಸುಗಳನ್ನೂ ದನ ಕುರಿ ಒಂಟೆ ಕತ್ತೆಗಳನ್ನೂ ಕೊಂದುಹಾಕು ಎಂಬದು.

4ಆಗ ಸೌಲನು ತೆಲಾಯಾಮಿನಲ್ಲಿ ಜನರನ್ನು ಕೂಡಿಸಿ ಲೆಕ್ಕ ಮಾಡಿದನು. ಇಸ್ರಾಯೇಲ್ಯರ ಕಾಲ್ಬಲವು ಎರಡು ಲಕ್ಷ ಜನವೂ ಯೆಹೂದನ ಮನುಷ್ಯರು ಹತ್ತು ಸಾವಿರ ಜನರೂ ಇದ್ದರು.

5ಸೌಲನು ಅಮಾಲೇಕ್ಯರ ಪಟ್ಟಣ ದವರೆಗೂ ಬಂದು ತಗ್ಗಿನಲ್ಲಿ ಹೊಂಚಿಹಾಕಿದ್ದನು.

೧ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी