ಏಸಾವನು ಯಾಕೋಬನಿಗೆ--ಆ ಕೆಂಪಾದ ಪದಾರ್ಥವನ್ನು ತಿನ್ನುವದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ ಅಂದನು. ಆದದರಿಂದ ಅವನಿಗೆ ಎದೋಮ್ ಎಂದು ಹೆಸರಾಯಿತು.
29ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರು ವಾಗ ಏಸಾವನು ದಣಿದು ಅಡವಿಯಿಂದ ಬಂದನು.
30ಏಸಾವನು ಯಾಕೋಬನಿಗೆ--ಆ ಕೆಂಪಾದ ಪದಾರ್ಥವನ್ನು ತಿನ್ನುವದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ ಅಂದನು. ಆದದರಿಂದ ಅವನಿಗೆ ಎದೋಮ್ ಎಂದು ಹೆಸರಾಯಿತು.
31ಆಗ ಯಾಕೋಬನು--ಈ ಹೊತ್ತು ನಿನ್ನ ಚೊಚ್ಚಲತನವನ್ನು ನನಗೆ ಮಾರು ಅಂದನು.
32ಏಸಾವನು--ಇಗೋ, ನಾನು ಸಾಯುತ್ತಿದ್ದೇನೆ; ಚೊಚ್ಚಲತನದ ಹಕ್ಕಿನಿಂದ ನನಗೇನು ಲಾಭ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ