ಆದದರಿಂದ ಆ ದೇಶದ ಜನರು ಯೆಹೂದ ಜನರ ಕೈಗಳನ್ನು ಬಲಹೀನ ಮಾಡಿ ಕಟ್ಟು ವದರಲ್ಲಿ ಅವರನ್ನು ಕಳವಳಪಡಿಸಿದರು.
2ಅವರು ಜೆರುಬ್ಬಾಬೆಲಿನ ಬಳಿಗೂ ಪಿತೃಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ--ನಾವು ನಿಮ್ಮ ಕೂಡ ಕಟ್ಟುತ್ತೇವೆ; ನಾವು ನಿಮ್ಮ ಹಾಗೆ ನಿಮ್ಮ ದೇವ ರನ್ನು ಹುಡುಕುತ್ತೇವೆ; ತಮ್ಮನ್ನು ಇಲ್ಲಿಗೆ ಬರಮಾಡಿದ ಅಶ್ಶೂರಿನ ಅರಸನಾದ ಎಸರ್ಹದೋನನ ದಿವಸಗಳು ಮೊದಲುಗೊಂಡು ಆತನಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ ಅಂದರು.
3ಆದರೆ ಜೆರುಬ್ಬಾ ಬೆಲನೂ ಯೇಷೂವನೂ ಮಿಕ್ಕಾದ ಇಸ್ರಾಯೇಲಿನ ಪಿತೃಗಳಲ್ಲಿ ಮುಖ್ಯಸ್ಥರೂ ಅವರಿಗೆ--ನಮ್ಮ ದೇವರಿಗೆ ಆಲಯವನ್ನು ಕಟ್ಟುವದಕ್ಕೆ ನಮಗೂ ನಿಮಗೂ ಏನು? ಪಾರಸಿಯರ ಅರಸನಾದ ಕೋರೆಷನೆಂಬ ಅರಸನು ನಮಗೆ ಆಜ್ಞಾಪಿಸಿದ ಹಾಗೆ ನಾವು ಇಸ್ರಾ ಯೇಲ್ ದೇವರಾಗಿರುವ ಕರ್ತನಿಗೆ ಅದನ್ನು ಕಟ್ಟು ವೆವು ಅಂದರು.
4ಆದದರಿಂದ ಆ ದೇಶದ ಜನರು ಯೆಹೂದ ಜನರ ಕೈಗಳನ್ನು ಬಲಹೀನ ಮಾಡಿ ಕಟ್ಟು ವದರಲ್ಲಿ ಅವರನ್ನು ಕಳವಳಪಡಿಸಿದರು.
5ಪಾರಸಿ ಯರ ಅರಸನಾದ ಕೋರೆಷನ ದಿನಗಳಲ್ಲೆಲ್ಲಾ ಪಾರ ಸಿಯರ ಅರಸನಾದ ದಾರ್ಯಾವೆಷನ ಆಳ್ವಿಕೆಯ ಪರ್ಯಂತರ ಅವರ ಯೋಚನೆಯನ್ನು ವ್ಯರ್ಥಮಾಡು ವದಕ್ಕೆ ಅವರಿಗೆ ವಿರೋಧವಾಗಿ ಯೋಚನಾಕರ್ತರನ್ನು ಕೂಲಿಗೆ ಇಟ್ಟು ಕೊಂಡರು.
6ಆದರೆ ಅಹಷ್ವೇರೋಷನು ಆಳುವಾಗ ಅವನ ಆಳ್ವಿಕೆಯ ಪ್ರಾರಂಭದಲ್ಲಿ ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಕಾಗದ ಬರೆದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ