ಇದಲ್ಲದೆ, ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷೇ ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.
19ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷಪಡುವೆನು; ಅದರಲ್ಲಿ ಅಳುವ ಸ್ವರವೂ ಕೂಗುವ ಸ್ವರವೂ ಇನ್ನು ಕೇಳಲ್ಪಡುವದಿಲ್ಲ.
20ಅಲ್ಲಿ ಕೆಲವು ದಿವಸಗಳ ಕೂಸೂ ತನ್ನ ದಿನ ತುಂಬದ ಮುದುಕನೂ ಇನ್ನು ಇರುವದಿಲ್ಲ; ಯಾಕಂದರೆ ಮಗುವು ನೂರು ವರುಷದ್ದಾಗಿ ಸಾಯುವದು, ಆದರೆ ಪಾಪಿಷ್ಠನು ನೂರು ವರುಷದವನಾಗಿ ಶಾಪ ಹೊಂದು ವನು.
21ಇದಲ್ಲದೆ, ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷೇ ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.
22ಅವರು ಕಟ್ಟಿದ್ದ ರಲ್ಲಿ ಇನ್ನೊಬ್ಬರು ವಾಸಮಾಡುವದಿಲ್ಲ. ಅವರು ನೆಟ್ಟ ದ್ದನ್ನು ಇನ್ನೊಬ್ಬರು ತಿನ್ನುವದಿಲ್ಲ; ಮರದ ದಿನಗಳ ಹಾಗೆ ನನ್ನ ಜನರ ದಿನಗಳು ಇರುವವು; ನಾನು ಆದುಕೊಂಡವರು ತಮ್ಮ ಕೈಕೆಲಸವನ್ನು ಅನು ಭವಿಸುವರು.
23ಅವರು ವ್ಯರ್ಥವಾಗಿ ದುಡಿಯರು ಕಷ್ಟವನ್ನು ಎದುರುಗೊಳ್ಳುವದಿಲ್ಲ; ಯಾಕಂದರೆ ಅವರು ಕರ್ತನು ಆಶೀರ್ವದಿಸಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವದಿಸ ಲ್ಪಡುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ