ನ್ಯಾಯಸ್ಥಾಪಕರು 5:13

ಆಗ ಉಳಿದವನನ್ನು ಆತನು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದನು; ಕರ್ತನು ನನ್ನನ್ನು ಪರಾಕ್ರಮಶಾಲಿಗಳ ಮೇಲೆ ಆಳು ವಂತೆ ಮಾಡಿದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 5

11ನೀರು ಸೇದುವ ಸ್ಥಳಗಳ ಹತ್ತಿರ ಬಿಲ್ಲುಗಾರರ ಶಬ್ದದಿಂದ ತಪ್ಪಿಸಲ್ಪಟ್ಟವರು ಅಲ್ಲಿ ಕರ್ತನ ನೀತಿಯುಳ್ಳ ಕ್ರಿಯೆಗಳನ್ನು ಇಸ್ರಾಯೇಲಿನಲ್ಲಿ ಆತನ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ನೀತಿಯುಳ್ಳ ಕ್ರಿಯೆಗಳನ್ನು ತಿರುತಿರುಗಿ ಪ್ರಕಟಿಸುವರು; ಕರ್ತನ ಜನರು ಬಾಗಲು ಗಳಿಗೆ ಇಳಿದು ಬರುವರು.

12ಎಚ್ಚರವಾಗು, ಎಚ್ಚರ ವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗು, ಹಾಡನ್ನು ಹಾಡು; ಬಾರಾಕನೇ; ಏಳು; ಅಬೀನೋವ ಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡಿಸು.

13ಆಗ ಉಳಿದವನನ್ನು ಆತನು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದನು; ಕರ್ತನು ನನ್ನನ್ನು ಪರಾಕ್ರಮಶಾಲಿಗಳ ಮೇಲೆ ಆಳು ವಂತೆ ಮಾಡಿದನು.

14ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯಾಮಿನಿಂದ ಉಂಟಾ ಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾವಿಾನನೂ; ಮಾಕೀರನಲ್ಲಿಂದ ಅಧಿಪತಿಗಳೂ ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವ ವರೂ ಬಂದರು.

15ಇಸ್ಸಾಕಾರನ ಪ್ರಧಾನರು ದೆಬೋ ರಳ ಸಂಗಡ ಇದ್ದರು; ಇಸ್ಸಾಕಾರನು, ಬಾರಾಕನು ಹಾಗೆಯೇ; ಕಾಲು ನಡೆಯಾಗಿ ತಗ್ಗಿನಲ್ಲಿ ಕಳುಹಿಸ ಲ್ಪಟ್ಟನು. ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಆಲೋಚನೆಗಳು ಇದ್ದವು.

ನ್ಯಾಯಸ್ಥಾಪಕರು 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी