ಯೆಹೆಜ್ಕೇಲನು 33:13

ನಾನು ನೀತಿವಂತನಿಗೆ--ನೀನು ನಿಶ್ಚಯವಾಗಿ ಬದುಕುವಿ ಎಂದು ಹೇಳುವಾಗ--ಅವನು ಒಂದು ವೇಳೆ ಅವನ ಸ್ವಂತ ನೀತಿಯನ್ನು ನಂಬಿ ಅನ್ಯಾಯವನ್ನು ಮಾಡಿದರೆ ಅವನ ಎಲ್ಲಾ ನೀತಿಯು ಜ್ಞಾಪಕಮಾಡಿ ಕೊಳ್ಳಲ್ಪಡುವದಿಲ್ಲ; ಆದರೆ ಅವನು ಮಾಡಿದ ಅವನ ಅಕ್ರಮಗಳಿಗಾಗಿಯೇ ಅವನು ಸಾಯುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 33

11ಅವರಿಗೆ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ --ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷ ಸಿಗುವದಿಲ್ಲ; ಆದರೆ ಆ ದುಷ್ಟನು ದುರ್ಮಾ ರ್ಗದಿಂದ ತಿರುಗಿಕೊಂಡು ಜೀವಿಸುವದಾದರೆ ಅದರಲ್ಲಿಯೇ ನನಗೆ ಸಂತೋಷಸಿಗುವದು; ಇಸ್ರಾ ಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿರಿ, ನೀವು ತಿರುಗಿ ಕೊಳ್ಳಿರಿ. ನೀವು ಸಾಯುವದು ಯಾಕೆ?

12ಮನುಷ್ಯ ಪುತ್ರನೇ. ನೀನು ನಿನ್ನ ಜನರ ಮಕ್ಕಳಿಗೆ ಹೇಳು--ನೀತಿವಂತನ ನೀತಿಯು ಅವನ ಅಪರಾಧದ ದಿನದಲ್ಲಿ ಅವನನ್ನು ತಪ್ಪಿಸುವದಿಲ್ಲ; ಹಾಗೆಯೇ ದುಷ್ಟನ ದುಷ್ಟತ್ವವು ಅವನು ತನ್ನ ದುಷ್ಟತ್ವವನ್ನು ಬಿಟ್ಟು ತಿರುಗುವ ದಿನದಲ್ಲಿ ಅದರಿಂದ ಬೀಳುವದಿಲ್ಲ; ನೀತಿವಂತನು ಪಾಪಮಾಡುವ ದಿನದಲ್ಲಿ ನೀತಿಯಿಂದ ಬದುಕ ಲಾರನು.

13ನಾನು ನೀತಿವಂತನಿಗೆ--ನೀನು ನಿಶ್ಚಯವಾಗಿ ಬದುಕುವಿ ಎಂದು ಹೇಳುವಾಗ--ಅವನು ಒಂದು ವೇಳೆ ಅವನ ಸ್ವಂತ ನೀತಿಯನ್ನು ನಂಬಿ ಅನ್ಯಾಯವನ್ನು ಮಾಡಿದರೆ ಅವನ ಎಲ್ಲಾ ನೀತಿಯು ಜ್ಞಾಪಕಮಾಡಿ ಕೊಳ್ಳಲ್ಪಡುವದಿಲ್ಲ; ಆದರೆ ಅವನು ಮಾಡಿದ ಅವನ ಅಕ್ರಮಗಳಿಗಾಗಿಯೇ ಅವನು ಸಾಯುತ್ತಾನೆ.

14ನಾನು ದುಷ್ಟನಿಗೆ--ನೀನು ನಿಶ್ಚಯ ವಾಗಿ ಸಾಯುವಿ ಎಂದು ಹೇಳುವಾಗ ಅವನು ಪಾಪ ದಿಂದ ತಿರುಗಿಕೊಂಡರೆ ಮತ್ತು ನ್ಯಾಯವನ್ನೂ ನೀತಿ ಯನ್ನೂ ಮಾಡಿದರೆ

15ದುಷ್ಟನು ತನ್ನ ಒತ್ತೆಯನ್ನು ಹಿಂದಕ್ಕೆ ಕೊಟ್ಟರೆ ಮತ್ತು ದೋಚಿಕೊಂಡದ್ದನ್ನು ತಿರುಗಿ ಕೊಟ್ಟು ಅನ್ಯಾಯವನ್ನು ಮಾಡದೆ ಜೀವದ ನಿಯಮಗಳಲ್ಲಿ ನಡೆದರೆ ಅವನು ಸಾಯದೆ ಖಂಡಿತ ವಾಗಿ ಬದುಕುವನು.

ಯೆಹೆಜ್ಕೇಲನು 33 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी