ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
6ಆದದ ರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ವನವೃಕ್ಷಗಳಲ್ಲಿ ದ್ರಾಕ್ಷೇಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಗಾಗಿ ಮಾಡಿರುವೆನೋ? ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ಕೊಟ್ಟಿದ್ದೇನೆ.
7ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಹೊರಗೆ ಬಂದು ಬೆಂಕಿಯೊಳಗಿಂದ ತಪ್ಪಿಸಿ ಕೊಂಡರೂ ಮತ್ತೊಂದು ಬೆಂಕಿಯು ಅವರನ್ನು ನುಂಗಿ ಬಿಡುವದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ ನಾನೇ ಕರ್ತನೆಂದು ತಿಳಿದುಕೊಳ್ಳುವಿರಿ.
8ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ