ಯಾಜಕಕಾಂಡ 14:29

ಯಾಜಕನ ಕೈಯಲ್ಲಿ ಮಿಕ್ಕಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು ಕರ್ತನ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತಮಾಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 14

27ತನ್ನ ಬಲಗೈ ಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸಬೇಕು.

28ಮತ್ತು ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರ ಳಿಗೂ ಅಪರಾಧಬಲಿಯ ರಕ್ತವನ್ನು ಹಚ್ಚಿದ ಸ್ಥಳದ ಮೇಲೆಯೂ ಹಚ್ಚಬೇಕು.

29ಯಾಜಕನ ಕೈಯಲ್ಲಿ ಮಿಕ್ಕಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು ಕರ್ತನ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತಮಾಡಬೇಕು.

30ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದು ಬೆಳವವನ್ನಾಗಲಿ ಪಾರಿವಾಳದ ಮರಿಯ ನ್ನಾಗಲಿ ಸಮರ್ಪಿಸಬೇಕು.

31ಅದರಂತೆಯೇ ಅವನು ತನ್ನಿಂದಾಗುವಷ್ಟು ಮೇರೆಗೆ ಒಂದನ್ನು ಪಾಪಬಲಿಗಾಗಿ ಇನ್ನೊಂದನ್ನು ದಹನಬಲಿಗಾಗಿ ಆಹಾರ ಸಮರ್ಪಣೆ ಯೊಂದಿಗೆ ಸಮರ್ಪಿಸಬೇಕು; ಶುದ್ಧಪಡಿಸಿಕೊಳ್ಳುವವ ನಿಗೋಸ್ಕರ ಯಾಜಕನು ಕರ್ತನ ಎದುರಿನಲ್ಲಿ ಪ್ರಾಯ ಶ್ಚಿತ್ತವನ್ನುಮಾಡಬೇಕು.

ಯಾಜಕಕಾಂಡ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी