ರೋಮಾಪುರದವರಿಗೆ 11:27

ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 11

25ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ

26ಹೀಗೆ ಇಸ್ರಾಯೇಲ್‌ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.

27ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.

28ಸುವಾರ್ತೆಯ ವಿಷಯದಲ್ಲಿ ಅವರು ನಿಮ್ಮ ನಿಮಿತ್ತವಾಗಿ ವೈರಿಗಳಾ ಗಿದ್ದಾರೆ; ಆದರೆ ಆಯ್ಕೆಯ ವಿಷಯದಲ್ಲಿ ಅವರು ಪಿತೃಗಳ ನಿಮಿತ್ತವಾಗಿ ಪ್ರಿಯರಾಗಿದ್ದಾರೆ.

29ದೇವರ ದಾನಗಳೂ ಕರೆಯುವಿಕೆಯೂ ಪಶ್ಚಾತ್ತಾಪವಿಲ್ಲದವು ಗಳಾಗಿವೆ.

ರೋಮಾಪುರದವರಿಗೆ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी