ನಾನು ನನ್ನ ಸಹೋದರರೂ ನನ್ನ ಸೇವಕರೂ ಅವರಿಂದ ಹಣ ವನ್ನೂ ಧಾನ್ಯವನ್ನೂ ಒತ್ತಾಯದಿಂದ ತಕ್ಕೊಳ್ಳಬಹು ದಾಗಿತ್ತು.
8ಅವ ರಿಗೆ--ಅನ್ಯರಿಗೆ ಮಾರಲ್ಪಟ್ಟ ಯೆಹೂದ್ಯರಾದ ನಮ್ಮ ಸಹೋದರರನ್ನು ನಾವು ನಮಗೆ ಶಕ್ತಿ ಇದ್ದ ಹಾಗೆ ವಿಮೋಚಿಸಿದೆವು. ನೀವು ನಿಮ್ಮ ಸಹೋದರರನ್ನು ಮಾರಿ ಬಿಡುವಿರೋ? ಇಲ್ಲವೆ ಅವರು ನಮಗೆ ಮಾರ ಲ್ಪಡುವರೋ ಅಂದೆನು. ಆಗ ಅವರು ಮೌನವಾಗಿ ದ್ದರು; ಅವರಿಗೆ ಮಾತು ಇಲ್ಲದೆ ಹೋಯಿತು.
9ನಾನು ಅವರಿಗೆನೀವು ಮಾಡುವುದು ಒಳ್ಳೇದಲ್ಲ; ನಮ್ಮ ಶತ್ರುಗಳಾದ ಅನ್ಯರ ನಿಂದೆಯ ನಿಮಿತ್ತ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲಾ.
10ನಾನು ನನ್ನ ಸಹೋದರರೂ ನನ್ನ ಸೇವಕರೂ ಅವರಿಂದ ಹಣ ವನ್ನೂ ಧಾನ್ಯವನ್ನೂ ಒತ್ತಾಯದಿಂದ ತಕ್ಕೊಳ್ಳಬಹು ದಾಗಿತ್ತು.
11ದಯಮಾಡಿ ಈ ಬಡ್ಡಿಯನ್ನು ಬಿಟ್ಟು ಬಿಡೋಣ. ನೀವು ಅವರಿಂದ ಒತ್ತಾಯದಿಂದ ತೆಗೆದುಕೊಂಡ ಅವರ ಹೊಲಗಳನ್ನೂ ದ್ರಾಕ್ಷಾತೋಟಗಳನ್ನೂ ಇಪ್ಪೇ ತೋಪುಗಳನ್ನೂ ಮನೆಗಳನ್ನೂ ನೂರಕ್ಕೆ ಒಂದಾದ ಹಣವನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೇಯನ್ನೂ ಇಂದು ಅವರಿಗೆ ತಿರಿಗಿಕೊಡಿರಿ ಎಂದು ಹೇಳಿದೆನು.
12ಅದಕ್ಕವರುನಾವು ತಿರಿಗಿ ಕೊಡುತ್ತೇವೆ; ಅವರಿಂದ ಏನೂ ಕೇಳು ವದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ ಅಂದರು. ಆಗ ನಾನು ಯಾಜಕರನ್ನು ಕರೆದು ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತಕ್ಕೊಂಡೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ