ಲೂಕನು 5:16

ಆತನಾದರೋ ತನ್ನನ್ನು ಪ್ರತ್ಯೇಕಿಸಿಕೊಂಡು ಅರಣ್ಯಕ್ಕೆ ಹೋಗಿ ಪ್ರಾರ್ಥಿಸಿದನು.

ಸಂದರ್ಭದೊಂದಿಗೆ ಓದಿ · ಲೂಕನು 5

14ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು.

15ಆದರೂ ಆತನ ಕೀರ್ತಿಯು ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು; ದೊಡ್ಡ ಸಮೂಹಗಳು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ರೋಗಗಳನ್ನು ಆತನಿಂದ ವಾಸಿಮಾಡಿಸಿಕೊಳ್ಳು ವದಕ್ಕೂ ಕೂಡಿ ಬಂದರು.

16ಆತನಾದರೋ ತನ್ನನ್ನು ಪ್ರತ್ಯೇಕಿಸಿಕೊಂಡು ಅರಣ್ಯಕ್ಕೆ ಹೋಗಿ ಪ್ರಾರ್ಥಿಸಿದನು.

17ಇದಾದ ಮೇಲೆ ಒಂದಾನೊಂದು ದಿನ ಆತನು ಬೋಧಿಸುತ್ತಿದ್ದಾಗ ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನ್ಯಾಯಪ್ರಮಾಣದ ಪಂಡಿತರೂ ಅಲ್ಲಿ ಕೂತುಕೊಂಡಿದ್ದರು. ಕರ್ತನ ಶಕ್ತಿಯು ಅವರನ್ನು ಸ್ವಸ್ಥ ಮಾಡುವದಕ್ಕೆ ಸಿದ್ಧವಿತ್ತು.

18ಆಗ ಇಗೋ, ಪಾರ್ಶ್ವವಾಯು ರೋಗವಿದ್ದ ಒಬ್ಬ ಮನುಷ್ಯನನ್ನು ಕೆಲವರು ಹಾಸಿಗೆಯಲ್ಲಿ ಹೊತ್ತು ಕೊಂಡು ಬಂದು ಅವನನ್ನು ಒಳಗೆ ಆತನ ಎದುರಿಗೆ ತರುವ ವಿಧಾನವನ್ನು ಹುಡುಕಿದರು.

ಲೂಕನು 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी