ಆಯಿಯ ಅರಸನನ್ನು ಜೀವಿತನಾಗಿ ಹಿಡಿದು ಯೆಹೋಶುವನ ಬಳಿಗೆ ತಂದರು.
21ಹೊಂಚಿ ಕೊಂಡ ಜನರು ಪಟ್ಟಣವನ್ನು ಹಿಡಿದದ್ದನ್ನೂ ಪಟ್ಟಣದ ಹೊಗೆ ಏಳುವದನ್ನೂ ಯೆಹೋಶುವನೂ ಇಸ್ರಾಯೇ ಲ್ಯರೆಲ್ಲರೂ ನೋಡುವಾಗ ತಿರುಗಿಕೊಂಡು ಆಯಿಯ ಮನುಷ್ಯರನ್ನು ಹೊಡೆದುಬಿಟ್ಟರು.
22ಅವರು ಪಟ್ಟಣ ದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿದರು. ಆದದರಿಂದ ಅವರಲ್ಲಿ ಒಬ್ಬರೂ ತಪ್ಪಿಸಿಕೊಂಡು ಹೋಗದ ಹಾಗೆಯೂ ಜೀವದಲ್ಲಿ ಉಳಿಯದ ಹಾಗೆಯೂ ಅವರನ್ನು ಹೊಡೆದರು.
23ಆಯಿಯ ಅರಸನನ್ನು ಜೀವಿತನಾಗಿ ಹಿಡಿದು ಯೆಹೋಶುವನ ಬಳಿಗೆ ತಂದರು.
24ಇಸ್ರಾಯೇಲ್ಯರು ಅರಣ್ಯದಲ್ಲಿ ಓಡಿಸಿದ ಆಯಿಯ ನಿವಾಸಿಗಳೆಲ್ಲರನ್ನು ಕತ್ತಿಯ ಬಾಯಿಂದ ಅವರೆಲ್ಲರು ಬಿದ್ದು ಮುಗಿಯುವ ವರೆಗೂ ಬೈಲಿನಲ್ಲಿ ಸಂಹರಿಸಿ ತೀರಿದ ತರುವಾಯ ಇಸ್ರಾಯೇಲ್ಯರೆಲ್ಲರೂ ಆಯಿಗೆ ತಿರುಗಿ ಅದನ್ನು ಕತ್ತಿಯ ಬಾಯಿಂದ ಹೊಡೆದರು.
25ಆ ದಿನದಲ್ಲಿ ಬಿದ್ದ ಸ್ತ್ರೀ ಪುರುಷರಾದ ಆಯಿಯ ಮನುಷ್ಯರೆಲ್ಲರು ಹನ್ನೆರಡು ಸಾವಿರ ಜನರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ