೧ ಕೊರಿಂಥದವರಿಗೆ 15:33

ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ.

ಸಂದರ್ಭದೊಂದಿಗೆ ಓದಿ · ೧ ಕೊರಿಂಥದವರಿಗೆ 15

31ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಷಯವಾಗಿ ನನಗಿರುವ ಸಂತೋಷದ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.

32ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧ ಮಾಡಿದ್ದು ಕೇವಲ ಮನುಷ್ಯರೀತಿಯಾಗಿದ್ದು ಸತ್ತವರು ಎದ್ದು ಬರುವದಿಲ್ಲವಾದರೆ ಅದರಿಂದ ನನಗೇನು ಪ್ರಯೋಜನ? ಹಾಗಾದರೆ ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.

33ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ.

34ನೀತಿಗಾಗಿ ಎಚ್ಚರಗೊಳ್ಳಿರಿ, ಪಾಪಮಾಡಬೇಡಿರಿ; ಕೆಲವರಿಗೆ ದೇವರ ವಿಷಯವಾದ ಜ್ಞಾನವೇ ಇಲ್ಲ; ನಾನು ಇದನ್ನು ನಿಮಗೆ ನಾಚಿಕೆ ಪಡಿಸುವದಕ್ಕಾಗಿ ಹೇಳುತ್ತೇನೆ.

35ಆದರೆ ಒಬ್ಬನು--ಸತ್ತವರು ಹೇಗೆ ಎಬ್ಬಿಸ ಲ್ಪಡುತ್ತಾರೆ? ಎಂಥ ದೇಹದಿಂದ ಅವರು ಬರುತ್ತಾರೆ ಎಂದು ಕೇಳಾನು.

೧ ಕೊರಿಂಥದವರಿಗೆ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी