ಪರಮ ಗೀತ 5:3

ನಾನು ನನ್ನ ಅಂಗಿಯನ್ನು ತೆಗೆದಿದ್ದೇನೆ; ಅದನ್ನು ತೊಟ್ಟುಕೊಳ್ಳುವದು ಹೇಗೆ? ನಾನು ನನ್ನ ಕಾಲು ಗಳನ್ನು ತೊಳಕೊಂಡೆನು; ನಾನು ಅವುಗಳನ್ನು ಮೈಲಿಗೆ ಮಾಡುವದು ಹೇಗೆ?

ಸಂದರ್ಭದೊಂದಿಗೆ ಓದಿ · ಪರಮ ಗೀತ 5

1ನನ್ನ ತೋಟಕ್ಕೆ ಬಂದೆನು, ನನ್ನ ಸಹೋದರಿಯೇ, ವಧುವೇ; ನನ್ನ ರಕ್ತಬೋಳ ವನ್ನೂ ನನ್ನ ಸುಗಂಧಗಳನ್ನೂ ಕೂಡಿಸಿದ್ದೇನೆ; ನನ್ನ ಜೇನು ಗೂಡನ್ನೂ ಜೇನು ತುಪ್ಪವನ್ನೂ ತಿಂದಿದ್ದೇನೆ; ನನ್ನ ದ್ರಾಕ್ಷಾರಸವನ್ನೂ ನನ್ನ ಹಾಲನ್ನೂ ಕುಡಿದಿದ್ದೇನೆ. ತಿನ್ನಿರಿ, ಓ ಸ್ನೇಹಿತರೇ; ಕುಡಿಯಿರಿ. ಹೌದು, ನನ್ನ ಪ್ರಿಯರೇ, ಸಮೃದ್ಧಿಯಾಗಿ ಕುಡಿಯಿರಿ.

2ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು.

3ನಾನು ನನ್ನ ಅಂಗಿಯನ್ನು ತೆಗೆದಿದ್ದೇನೆ; ಅದನ್ನು ತೊಟ್ಟುಕೊಳ್ಳುವದು ಹೇಗೆ? ನಾನು ನನ್ನ ಕಾಲು ಗಳನ್ನು ತೊಳಕೊಂಡೆನು; ನಾನು ಅವುಗಳನ್ನು ಮೈಲಿಗೆ ಮಾಡುವದು ಹೇಗೆ?

4ನನ್ನ ಪ್ರಿಯನು ಬಾಗಲ ಸಂದಿನಲ್ಲಿ ತನ್ನ ಕೈಹಾಕಿದನು; ನನ್ನ ಕರುಳುಗಳು ಅವನಿಗಾಗಿ ಮರುಗಿದವು.

5ನಾನು ನನ್ನ ಪ್ರಿಯನಿಗೆ ತೆರೆಯಲು ಎದ್ದಾಗ ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವೂ ನನ್ನ ಬೆರಳುಗಳಿಂದ ಸೋರುವ ಬೋಳವೂ ಸುರಿಯಿತು.

ಪರಮ ಗೀತ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी