೨ ಸಮುವೇಲನು 4:8

ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋ ಶೆತನ ತಲೆಯನ್ನು ತಂದು ಅರಸನಿಗೆ--ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗನಾದ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಕರ್ತನು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲ ನಿಗೂ ಅವನ ಸಂತಾನಕ್ಕೂ ಮುಯ್ಯಿತೀರಿಸಿದ್ದಾನೆ ಅಂದರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 4

6ಗೋಧಿಯನ್ನು ತಕ್ಕೊಂಡು ಹೋಗುವವರಾಗಿ ನಡು ಮನೆಯೊಳಗೆ ಬಂದು ಅವನ ಐದನೇ ಎಲುಬಿನ ಸಂದಿನಲ್ಲಿ ತಿವಿದರು. ರೇಕಾಬನೂ ಅವನ ಸಹೋದರನಾದ ಬಾಣನೂ ತಪ್ಪಿಸಿಕೊಂಡು ಹೋದರು.

7ಅವರು ಮನೆಯೊಳಗೆ ಪ್ರವೇಶಿಸಿದಾಗ ಅವನು ಮಲಗುವ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದನು; ಇವರು ಅವನನ್ನು ಹೊಡೆದು ಕೊಂದುಹಾಕಿ ತಲೆಯನ್ನು ಕಡಿದು ಅದನ್ನು ತೆಗೆದುಕೊಂಡು ರಾತ್ರಿಯೆಲ್ಲಾ ಬೈಲಿನಲ್ಲಿ ನಡೆದು

8ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋ ಶೆತನ ತಲೆಯನ್ನು ತಂದು ಅರಸನಿಗೆ--ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗನಾದ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಕರ್ತನು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲ ನಿಗೂ ಅವನ ಸಂತಾನಕ್ಕೂ ಮುಯ್ಯಿತೀರಿಸಿದ್ದಾನೆ ಅಂದರು.

9ಆಗ ದಾವೀದನು ಬೇರೋತಿನ ಮಗನಾ ಗಿರುವ ರಿಮ್ಮೋನನ ಮಕ್ಕಳಾದ ರೇಕಾಬಿಗೂ ಅವನ ಸಹೋದರನಾದ ಬಾಣನಿಗೂ ಪ್ರತ್ಯುತ್ತರವಾಗಿ--ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಕರ್ತನ ಜೀವದಾಣೆ, ತನ್ನ ಕಣ್ಣಿಗೆ ಸುವರ್ತಮಾನವನ್ನು ತಂದವನು ಎಂದು ಕಾಣಿಸಿಕೊಂಡವನಾಗಿ ನಾನು ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡು ವೆನೆಂದು ನೆನಸಿ

10ಒಬ್ಬನು ನನಗೆ--ಇಗೋ, ಸೌಲನು ಸತ್ತನೆಂದು ಹೇಳಿದ್ದರಿಂದ ನಾನು ಚಿಕ್ಲಗಿನಲ್ಲಿ ಅವನನ್ನು ಹಿಡಿದು ಕೊಂದುಹಾಕಿದೆನು.

೨ ಸಮುವೇಲನು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी