ವಿಮೋಚನಕಾಂಡ 30:13

ಎಣಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನುಷ್ಯನು ಕೊಡಬೇಕಾದದ್ದು ಏನಂದರೆ: ಶೆಕೆಲಿಗೆ ಇಪ್ಪತ್ತು ಗೇರಾ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರೆ ಶೆಕೆಲ್‌ ಕೊಡಬೇಕು. ಅರೆ ಶೆಕೆಲ್‌ ಕರ್ತನಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 30

11ಆಗ ಕರ್ತನು ಮಾತನಾಡಿ ಮೋಶೆಗೆ--

12ನೀನು ಇಸ್ರಾಯೇಲ್‌ ಮಕ್ಕಳ ಲೆಕ್ಕವನ್ನು ಅದರ ಸಂಖ್ಯೆಗೆ ಸರಿಯಾಗಿ ಎಣಿಸಿದಾಗ ಅವರಲ್ಲಿ ವ್ಯಾಧಿ ಉಂಟಾಗದ ಹಾಗೆ ಅವರನ್ನು ಕ್ರಮವಾಗಿ ಎಣಿಸಿ ಒಬ್ಬೊಬ್ಬನು ತನ್ನ ಪ್ರಾಣದ ವಿಮೋಚನೆಯ ಕ್ರಮವನ್ನು ಕರ್ತನಿಗೆ ಕೊಡಬೇಕು.

13ಎಣಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನುಷ್ಯನು ಕೊಡಬೇಕಾದದ್ದು ಏನಂದರೆ: ಶೆಕೆಲಿಗೆ ಇಪ್ಪತ್ತು ಗೇರಾ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರೆ ಶೆಕೆಲ್‌ ಕೊಡಬೇಕು. ಅರೆ ಶೆಕೆಲ್‌ ಕರ್ತನಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.

14ಕ್ರಮವಾಗಿ ಲೆಕ್ಕಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನು ಷ್ಯನು ಇಪ್ಪತ್ತು ವರುಷ ಮೊದಲುಗೊಂಡು ಅದಕ್ಕೆ ಮೇಲಾದ ಪ್ರಾಯವುಳ್ಳವರು ಕರ್ತನಿಗೆ ಕಾಣಿಕೆಯನ್ನು ಕೊಡಬೇಕು.

15ನಿಮ್ಮ ಪ್ರಾಣಗಳ ಪ್ರಾಯಶ್ಚಿತ್ತಕ್ಕೆ ಕರ್ತನಿಗೆ ಅರ್ಪಿಸುವ ಕಾಣಿಕೆಯನ್ನು ಕೊಡುವದರಲ್ಲಿ ಐಶ್ವರ್ಯವಂತರು ಅರೆ ಶೆಕೆಲಿಗಿಂತ ಹೆಚ್ಚು ಕೊಡಬಾರದು. ಬಡವನು ಕಡಿಮೆ ಕೊಡಬಾರದು.

ವಿಮೋಚನಕಾಂಡ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी