ಆಗ ಅವನು ಅವರಿಗೆ--ತಿನ್ನುವಂಥದ್ದರಿಂದ ತಿನ್ನ ತಕ್ಕದ್ದು ಹೊರಟಿತು, ಬಲವಾದದ್ದರಿಂದ ಸಿಹಿಯು ಹೊರಟಿತು ಅಂದನು.
12ಅವರಿಗೆ ಸಂಸೋನನು--ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ನನಗೆ ಅದರ ಅರ್ಥವನ್ನು ನಿಜವಾಗಿ ಹೇಳಿದರೆ ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತು ವಸ್ತ್ರಗಳನ್ನೂ ಕೊಡುವೆನು.
13ಅದರ ಅರ್ಥವನ್ನು ನೀವು ನನಗೆ ಹೇಳದೆ ಹೋದರೆ ನೀವು ನನಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತುವಸ್ತ್ರ ಗಳನ್ನೂ ಕೊಡಬೇಕು ಅಂದನು. ಅವರು ಅವನಿಗೆನೀನು ನಿನ್ನ ಒಗಟನ್ನು ಹೇಳು, ಅದನ್ನು ಕೇಳೋಣ ಅಂದರು.
14ಆಗ ಅವನು ಅವರಿಗೆ--ತಿನ್ನುವಂಥದ್ದರಿಂದ ತಿನ್ನ ತಕ್ಕದ್ದು ಹೊರಟಿತು, ಬಲವಾದದ್ದರಿಂದ ಸಿಹಿಯು ಹೊರಟಿತು ಅಂದನು.
15ಒಗಟನ್ನು ಅವರು ಮೂರು ದಿವಸ ಬಿಡಿಸಲಾರದೆ ಹೋದರು. ಏಳನೇ ದಿವಸದಲ್ಲಿ ಆದದ್ದೇನಂದರೆ, ಅವರು ಸಂಸೋನನ ಹೆಂಡತಿಗೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯನ್ನೂ ಬೆಂಕಿ ಯಿಂದ ಸುಟ್ಟು ಬಿಡದಹಾಗೆ ನೀನು ನಿನ್ನ ಗಂಡನ ಆ ಒಗಟನ್ನು ನಮಗೆ ತಿಳಿಸುವ ಹಾಗೆ ಅವನನ್ನು ಮರುಳುಗೊಳಿಸು. ನೀನು ನಮಗೆ ಉಂಟಾದದ್ದನ್ನು ಕಸಕೊಳ್ಳುವದಕ್ಕಲ್ಲವೇ ನಮ್ಮನ್ನು ಕರೆಸಿದಿ ಅಂದರು.
16ಆಗ ಸಂಸೋನನ ಹೆಂಡತಿ ಅವನ ಮುಂದೆ ಅತ್ತು--ನೀನು ನನ್ನನ್ನು ಪ್ರೀತಿಮಾಡದೆ ನನ್ನನ್ನು ಹಗೆ ಮಾಡುತ್ತೀ. ನೀನು ನನ್ನ ಜನರ ಮಕ್ಕಳಿಗೆ ಒಂದು ಒಗಟನ್ನು ಹೇಳಿ ಅದನ್ನು ನನಗೆ ತಿಳಿಸದೆ ಹೋದಿ ಅಂದಳು. ಅವನು ಅವಳಿಗೆ--ಇಗೋ, ನಾನು ನನ್ನ ತಂದೆ ತಾಯಿಗಳಿಗೆ ಅದನ್ನು ತಿಳಿಸಲಿಲ್ಲ; ನಿನಗೆ ತಿಳಿಸುವೆನೋ? ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ