ಕರ್ತನು ರಾಜ್ಯವನ್ನು ನಿನ್ನ ಕೈಯಿಂದ ತೆಗೆದುಕೊಂಡು ಅದನ್ನು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟನು.
15ಆಗ ಸಮುವೇಲನು ಸೌಲನಿಗೆ--ನೀನು ನನ್ನನ್ನು ಏರಿ ಬರ ಮಾಡಿ ಯಾಕೆ ವಿಶ್ರಾಂತಿಯನ್ನು ಕೆಡಿಸಿದಿ ಅಂದನು. ಅದಕ್ಕೆ ಸೌಲನು--ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ; ಯಾಕಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧ ಮಾಡುತ್ತಾರೆ; ಆದರೆ ದೇವರು ನನ್ನನ್ನು ಬಿಟ್ಟುಹೋದನು. ಆತನು ಪ್ರವಾದಿಗಳ ಮುಖಾಂತರ ವಾದರೂ ಸ್ವಪ್ನದ ಮುಖಾಂತರವಾದರೂ ನನಗೆ ಪ್ರತ್ಯುತ್ತರಕೊಡಲಿಲ್ಲ; ಆದದರಿಂದ ನಾನು ಮಾಡ ಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು ಅಂದನು.
16ಸಮುವೇಲನು ಅವನಿಗೆ--ಕರ್ತನು ನಿನ್ನನ್ನು ಬಿಟ್ಟುಹೋಗಿ ನಿನಗೆ ಶತ್ರುವಾಗಿರುವಾಗ ನೀನು ನನ್ನನ್ನು ಕೇಳುವದು ಯಾಕೆ? ಕರ್ತನು ನನ್ನ ಮುಖಾಂತರ ಹೇಳಿದ ಹಾಗೆಯೇ ನಿನಗೆ ಮಾಡಿದ್ದಾನೆ;
17ಕರ್ತನು ರಾಜ್ಯವನ್ನು ನಿನ್ನ ಕೈಯಿಂದ ತೆಗೆದುಕೊಂಡು ಅದನ್ನು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟನು.
18ನೀನು ಕರ್ತನ ಮಾತನ್ನು ಕೇಳದೆ ಅಮಾಲೇಕ್ಯರ ಮೇಲೆ ಇದ್ದ ಆತನ ಉಗ್ರಕೋಪವನ್ನು ತೀರಿಸದೆ ಹೋದದರಿಂದ ಕರ್ತನು ಈ ದಿವಸದಲ್ಲಿ ನಿನಗೆ ಹೀಗೆ ಮಾಡಿದನು.
19ಕರ್ತನು ನಿನ್ನ್ನ ಸಹಿತವಾಗಿ ಇಸ್ರಾಯೇಲ್ಯರನ್ನೂ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿ ಕೊಡುವನು. ನಾಳೆ ನೀನೂ ನಿನ್ನ ಕುಮಾರರೂ ನನ್ನ ಸಂಗಡ ಇರುವಿರಿ. ಕರ್ತನು ಇಸ್ರಾಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ