ಆಗ ನೀವು--ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ.
24ಇಕ್ಕಟ್ಟಾದ ಬಾಗಲಿನಿಂದ ಒಳಗೆ ಪ್ರವೇಶಿಸುವದಕ್ಕೆ ಪ್ರಯಾಸಪಡಿರಿ; ಯಾಕಂ ದರೆ ಅನೇಕರು ಒಳಗೆ ಪ್ರವೇಶಿಸುವದಕ್ಕೆ ಪ್ರಯತ್ನಿಸಿ ದರೂ ಆಗುವದಿಲ್ಲ ಎಂದು ನಾನು ನಿಮಗೆ ಹೇಳು ತ್ತೇನೆ.
25ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು.
26ಆಗ ನೀವು--ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ.
27ಆದರೆ ಆತನು--ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ.
28ಆದರೆ ನೀವು ಅಬ್ರಹಾಮ ಇಸಾಕ ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರರಾಜ್ಯದಲ್ಲಿ ಇರುವದನ್ನೂ ನೀವು ಮಾತ್ರ ಹೊರಗೆ ದೊಬ್ಬಲ್ಪಟ್ಟಿರುವದನ್ನೂ ನೋಡು ವಾಗ ಅಲ್ಲಿ ನಿಮಗೆ ಗೋಳಾಟವೂ ಹಲ್ಲುಕಡಿ ಯೋಣವೂ ಇರುವವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ