ಎಸ್ತೇರಳು 8:12

ಅವರು ಪ್ರತಿ ಪಟ್ಟಣದಲ್ಲಿ ಕೂಡಿಕೊಂಡು ತಮ್ಮ ಪ್ರಾಣಕ್ಕೋಸ್ಕರ ಎದ್ದು ಆ ಪ್ರಾಂತ್ಯದ ಜನರ ಸೈನ್ಯದಲ್ಲಿ ಯಾರಾದರೂ ಅವರಿಗೆ ವಿರೋಧವಾಗಿ ಎದ್ದರೆ ಅವರನ್ನು, ಚಿಕ್ಕವ ರನ್ನೂ ಸ್ತ್ರೀಯರನ್ನೂ ಕೂಡ ಸಂಹರಿಸುವದಕ್ಕೂ ಕೊಂದುಹಾಕುವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅಪ್ಪಣೆ ಕೊಟ್ಟನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 8

10ಅವನು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅರಸನ ಉಂಗುರದಿಂದ ಮುದ್ರೆ ಹಾಕಿ ಪತ್ರಗಳನ್ನು, ಕುದುರೆಗಳನ್ನು, ಸವಾರಿ ಹತ್ತಿ ಕೊಂಡಿದ್ದ ಅಂಚೆಯವರ ಮೂಲಕ ಹೇಸರ ಕತ್ತೆಗಳ ಮೇಲೆಯೂ ಒಂಟೆಗಳ ಮೇಲೆಯೂ ವೇಗವಾಗಿ ಓಡುವ ಎಳೇ ಒಂಟೆಗಳ ಮೇಲೆಯೂ ಕಳುಹಿಸಿದನು.

11ಅವುಗಳಲ್ಲಿ ಅರಸನು ಯೆಹೂದ್ಯರಿಗೆ ಕೊಟ್ಟದ್ದೇನಂದರೆ--ಅರಸ ನಾದ ಅಹಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿ, ಒಂದು ದಿನದಲ್ಲಿ ಅಡಾರ್‌ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ

12ಅವರು ಪ್ರತಿ ಪಟ್ಟಣದಲ್ಲಿ ಕೂಡಿಕೊಂಡು ತಮ್ಮ ಪ್ರಾಣಕ್ಕೋಸ್ಕರ ಎದ್ದು ಆ ಪ್ರಾಂತ್ಯದ ಜನರ ಸೈನ್ಯದಲ್ಲಿ ಯಾರಾದರೂ ಅವರಿಗೆ ವಿರೋಧವಾಗಿ ಎದ್ದರೆ ಅವರನ್ನು, ಚಿಕ್ಕವ ರನ್ನೂ ಸ್ತ್ರೀಯರನ್ನೂ ಕೂಡ ಸಂಹರಿಸುವದಕ್ಕೂ ಕೊಂದುಹಾಕುವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅಪ್ಪಣೆ ಕೊಟ್ಟನು.

13ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿಗೆಮುಯ್ಯಿ ಮಾಡಲು ಆ ದಿನಕ್ಕೆ ಅವರು ಸಿದ್ಧವಾಗಿರುವ ಹಾಗೆ ಈ ಆಜ್ಞಾಪತ್ರದ ಪ್ರತಿಯು ಪ್ರಾಂತ್ಯ, ಪ್ರಾಂತ್ಯದಲ್ಲಿ ಸಕಲ ಜನರಿಗೂ ಸಾರಿ ಹೇಳ ಲ್ಪಟ್ಟಿತು.

14ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಓಡಿಸಲ್ಪಟ್ಟ ಕಾರಣ ಹೇಸರ ಕತ್ತೆಗಳ ಮೇಲೆಯೂ ವೇಗವಾದ ಒಂಟೆಗಳ ಮೇಲೆಯೂ ಹೊರಟರು. ಈ ಆಜ್ಞೆಯು ಶೂಷನಿನ ಅರಮನೆಯಲ್ಲಿ ಕೊಡಲ್ಪಟ್ಟಿತು.

ಎಸ್ತೇರಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी