ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ; ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ; ನಾನೇ ಕರ್ತನು.
14ಕಿವುಡನನ್ನು ಶಪಿಸಬಾರದು; ಕುರು ಡನು ಮುಗ್ಗರಿಸುವಂತೆ ಅವನ ಮುಂದೆ ಕಲ್ಲನ್ನು ಇಡ ಬಾರದು, ಆದರೆ ನಿನ್ನ ದೇವರಿಗೆ ಭಯಪಡಬೇಕು; ನಾನೇ ಕರ್ತನು.
15ನ್ಯಾಯತೀರ್ಪಿನಲ್ಲಿ ನೀನು ಅನ್ಯಾಯಮಾಡದಿರು; ಬಡವನ ಮುಖದಾಕ್ಷಿಣ್ಯ ನೋಡಬೇಡ, ಬಲಿಷ್ಠನ ವ್ಯಕ್ತಿತ್ವವನ್ನು ಗೌರವಿಸದಿರು. ಆದರೆ ನಿನ್ನ ನೆರೆಯವನಿಗೆ ನೀತಿಯಲ್ಲಿ ನ್ಯಾಯತೀರ್ಪು ಮಾಡು.
16ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ; ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ; ನಾನೇ ಕರ್ತನು.
17ನಿನ್ನ ಹೃದಯ ದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ; ಹೇಗಾ ದರೂ ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು.
18ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆಮುಯ್ಯಿ ತೀರಿಸದವ ನಾಗಿಯೂ ಸೇಡು ತೀರಿಸದೆಯೂ ಇರು. ಆದರೆ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು; ನಾನೇ ಕರ್ತನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ