ಎಜ್ರನು 7:11

ಕರ್ತನ ಆಜ್ಞೆಗಳ ವಾಕ್ಯಗಳನ್ನೂ ಆತನು ಇಸ್ರಾ ಯೇಲಿಗೆ ಕೊಟ್ಟ ಕಟ್ಟಳೆಗಳನ್ನೂ ಬೋಧಿಸತಕ್ಕ ಶಾಸ್ತ್ರಿಯೂ ಯಾಜಕನೂ ಆದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರದ ಪ್ರತಿ ಏನಂದರೆ--

ಸಂದರ್ಭದೊಂದಿಗೆ ಓದಿ · ಎಜ್ರನು 7

9ಇವನು ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಬಾಬೆಲಿನಿಂದ ಹೋಗುವು ದಕ್ಕೆ ಯತ್ನಿಸಿ ತನ್ನ ದೇವರ ಒಳ್ಳೇ ಕೈ ಅವನ ಮೇಲೆ ಇದ್ದದ್ದರಿಂದ ಅವನ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆರೂಸಲೇಮಿನಲ್ಲಿ ಬಂದು ಸೇರಿದನು.

10ಎಜ್ರನು ಕರ್ತನ ನ್ಯಾಯಪ್ರಮಾಣವನ್ನು ವಿಚಾರಿ ಸುವದಕ್ಕೂ ಅದರ ಪ್ರಕಾರ ಮಾಡುವದಕ್ಕೂ ಇಸ್ರಾ ಯೇಲಿನಲ್ಲಿ ನೇಮನ್ಯಾಯಗಳನ್ನು ಕಲಿಸುವದಕ್ಕೂ ತನ್ನ ಹೃದಯವನ್ನು ಸಿದ್ಧಮಾಡಿದನು.

11ಕರ್ತನ ಆಜ್ಞೆಗಳ ವಾಕ್ಯಗಳನ್ನೂ ಆತನು ಇಸ್ರಾ ಯೇಲಿಗೆ ಕೊಟ್ಟ ಕಟ್ಟಳೆಗಳನ್ನೂ ಬೋಧಿಸತಕ್ಕ ಶಾಸ್ತ್ರಿಯೂ ಯಾಜಕನೂ ಆದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರದ ಪ್ರತಿ ಏನಂದರೆ--

12ಅರಸರಿಗೆ ಅರಸನಾದ ಅರ್ತಷಸ್ತನು ಪರಲೋಕದ ದೇವರ ನ್ಯಾಯಪ್ರಮಾಣ ವಿಷಯ ಶಾಸ್ತ್ರಿ ಯಾದ ಎಜ್ರನೆಂಬ ಯಾಜಕನಿಗೆ ಪೂರ್ಣ ಸಮಾಧಾನ ವಾಗಲಿ.

13ಇಂಥ ಸಮಯದಲ್ಲಿ ನನ್ನ ರಾಜ್ಯದಲ್ಲಿ ರುವ ಇಸ್ರಾಯೇಲಿನ ಸಮಸ್ತ ಜನರಲ್ಲಿಯೂ ಅವರ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಯಾರಾದರೂ ನಿನ್ನ ಸಂಗಡ ಯೆರೂಸಲೇಮಿಗೆ ಹೋಗಲು ಮನಸ್ಸಿ ದ್ದರೆ ಅವರು ಹೋಗಬಹುದೆಂದು ಅಪ್ಪಣೆಯನ್ನು ಕೊಟ್ಟಿದ್ದೇನೆ.

ಎಜ್ರನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी