ಅಪೊಸ್ತಲರ ಕೃತ್ಯಗಳು 7:32

ಆಗ--ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ಹೇಳುವ ಕರ್ತನ ಧ್ವನಿಯು ಅವನಿಗಾಯಿತು. ಆಗ ಮೋಶೆಯು ನಡುಗುತ್ತಾ ಅದನ್ನು ನೋಡುವದಕ್ಕೆ ಧೈರ್ಯವಿಲ್ಲ ದವನಾದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 7

30ನಾಲ್ವತ್ತು ವರುಷ ತುಂಬಿದ ಮೇಲೆ ಸೀನಾಯಿ ಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.

31ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ನೋಡಬೇಕೆಂದು ಹತ್ತಿರಕ್ಕೆ ಬಂದನು.

32ಆಗ--ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ಹೇಳುವ ಕರ್ತನ ಧ್ವನಿಯು ಅವನಿಗಾಯಿತು. ಆಗ ಮೋಶೆಯು ನಡುಗುತ್ತಾ ಅದನ್ನು ನೋಡುವದಕ್ಕೆ ಧೈರ್ಯವಿಲ್ಲ ದವನಾದನು.

33ಕರ್ತನು ಅವನಿಗೆ--ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿ.

34ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी