೨ ಸಮುವೇಲನು 18:26

ಅವನು ಬಂದು ಸವಿಾಪಿಸಿದನು. ಕಾವ ಲುಗಾರನು ಬೇರೊಬ್ಬನು ಓಡಿ ಬರುವದನ್ನು ಕಂಡು ಬಾಗಲು ಕಾಯುವವನನ್ನು ಕರೆದು--ಇಗೋ, ಮತ್ತೊ ಬ್ಬನು ಒಂಟಿಯಾಗಿ ಓಡಿ ಬರುತ್ತಿದ್ದಾನೆ ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 18

24ಆದರೆ ದಾವೀದನು ಎರಡು ಬಾಗಲುಗಳ ಮಧ್ಯ ದಲ್ಲಿ ಕುಳಿತಿದ್ದನು. ಕಾವಲುಗಾರನು ಗೋಪುರದ ಮಾಳಿಗೆಯ ಮೇಲೆ ಏರಿ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಒಬ್ಬ ಮನುಷ್ಯನು ಒಂಟಿಯಾಗಿ ಓಡಿ ಬರು ತ್ತಿದ್ದನು.

25ಆಗ ಕಾವಲುಗಾರನು ಕೂಗಿ ಅರಸನಿಗೆ ತಿಳಿಸಿದನು. ಅರಸನು--ಅವನು ಒಬ್ಬನಾಗಿ ಬಂದರೆ ಅವನ ಬಾಯಿಯಲ್ಲಿ ವರ್ತಮಾನ ಇರುವದು ಅಂದನು.

26ಅವನು ಬಂದು ಸವಿಾಪಿಸಿದನು. ಕಾವ ಲುಗಾರನು ಬೇರೊಬ್ಬನು ಓಡಿ ಬರುವದನ್ನು ಕಂಡು ಬಾಗಲು ಕಾಯುವವನನ್ನು ಕರೆದು--ಇಗೋ, ಮತ್ತೊ ಬ್ಬನು ಒಂಟಿಯಾಗಿ ಓಡಿ ಬರುತ್ತಿದ್ದಾನೆ ಅಂದನು.

27ಅದಕ್ಕೆ ಅರಸನು--ಅವನು ಸಹ ವರ್ತಮಾನ ತಕ್ಕೊಂಡು ಬರುತ್ತಾನೆ ಅಂದನು. ಕಾವಲುಗಾರನುಮೊದಲನೆಯವನ ಓಟವು ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಇರುವದೆಂದು ನನಗೆ ಕಾಣುತ್ತದೆ ಅಂದನು. ಅದಕ್ಕೆ ಅರಸನು--ಅವನು ಒಳ್ಳೆಯವನು, ಒಳ್ಳೇ ವರ್ತಮಾನವನ್ನು ತರುತ್ತಾನೆ ಅಂದನು.

28ಆಗ ಅಹೀಮಾಚನು ಕೂಗಿ ಅರಸನಿಗೆಎಲ್ಲವೂ ಕ್ಷೇಮ ಎಂದು ಹೇಳಿ ಅರಸನ ಮುಂದೆಅರಸನಾದ ನನ್ನ ಒಡೆಯನಿಗೆ ವಿರೋಧವಾಗಿ ತಮ್ಮ ಕೈಗಳನ್ನೆತ್ತಿದ ಜನರನ್ನು ಒಪ್ಪಿಸಿಕೊಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ ಅಂದನು.

೨ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी