ಯೆಶಾಯ 22:22

ದಾವೀದನ ಮನೆಯ ಬೀಗ ದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು; ಅವನು ತೆರೆದರೆ ಯಾರು ಮುಚ್ಚರು ಮುಚ್ಚಿದರೆ ಯಾರು ತೆರೆಯರು.

ಸಂದರ್ಭದೊಂದಿಗೆ ಓದಿ · ಯೆಶಾಯ 22

20ಆ ದಿನದಲ್ಲಿ ಆಗುವದೇನಂದರೆ--ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು,

21ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ ನಿನ್ನ ನಡುಕಟ್ಟಿ ನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನ ಕೈಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ ಯೆಹೂದದ ಮನೆತನದವರಿಗೂ ತಂದೆಯಾಗಿರುವನು.

22ದಾವೀದನ ಮನೆಯ ಬೀಗ ದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು; ಅವನು ತೆರೆದರೆ ಯಾರು ಮುಚ್ಚರು ಮುಚ್ಚಿದರೆ ಯಾರು ತೆರೆಯರು.

23ಭದ್ರವಾದ ಸ್ಥಳದಲ್ಲಿ ಮೊಳೆ ಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು; ಅವನು ತನ್ನ ತಂದೆಯ ಮನೆಗೆ ವೈಭವವುಳ್ಳ ಸಿಂಹಾ ಸನವಾಗಿರುವನು.

24ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ಎಲ್ಲಾ ವೈಭವವನ್ನು ಅವರು ಅವನಿಗೆ ವಹಿ ಸುವರು.

ಯೆಶಾಯ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी