ಅವರು ಅದರಂತೆ ಮಾಡಿ ವಿಾನಿನ ದೊಡ್ಡ ರಾಶಿಯನ್ನು ಹಿಡಿದರು. ಅವರ ಬಲೆಯು ಹರಿಯಿತು.
4ಆತನು ಮಾತನಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ--(ದೋಣಿಯನ್ನು) ಆಳವಾದ ಸ್ಥಳಕ್ಕೆ ನಡಿಸಿ ವಿಾನು ಹಿಡಿಯುವದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ ಎಂದು ಹೇಳಿದನು.
5ಅದಕ್ಕೆ ಪ್ರತ್ಯುತ್ತರವಾಗಿ ಸೀಮೋನನು ಆತನಿಗೆ--ಗುರುವೇ, ನಾವು ರಾತ್ರಿ ಯೆಲ್ಲಾ ಪ್ರಯಾಸಪಟ್ಟೆವು. ಆದರೆ ಏನೂ ಸಿಕ್ಕಲಿಲ್ಲ; ಆದಾಗ್ಯೂ ನಿನ್ನ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ ಎಂದು ಹೇಳಿದನು.
6ಅವರು ಅದರಂತೆ ಮಾಡಿ ವಿಾನಿನ ದೊಡ್ಡ ರಾಶಿಯನ್ನು ಹಿಡಿದರು. ಅವರ ಬಲೆಯು ಹರಿಯಿತು.
7ಆಗ ಬೇರೆ ದೋಣಿ ಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆ ಮಾಡಿದರು; ಮತ್ತು ಅವರು ಬಂದು ಎರಡು ದೋಣಿಗಳನ್ನು ತುಂಬಿ ಸಲಾಗಿ ಅವು ಮುಳುಗಲಾರಂಭಿಸಿದವು.
8ಸೀಮೋನ್ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ