ನ್ಯಾಯಸ್ಥಾಪಕರು 19:14

ಹಾಗೆಯೇ ಅವರು ದಾಟಿಹೋದರು. ಅವರು ಬೆನ್ಯಾವಿಾನನಿಗೆ ಸೇರಿದ ಗಿಬೆಯ ಬಳಿಗೆ ಬರುವಾಗ ಸೂರ್ಯ ಮುಳು ಗಿತು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 19

12ಆದರೆ ಅವನ ಯಜಮಾನನು ಅವನಿಗೆ--ನಾವು ಇಲ್ಲಿ ಇಸ್ರಾಯೇಲ್‌ ಮಕ್ಕಳಲ್ಲದ ಅನ್ಯರ ಪಟ್ಟಣದಲ್ಲಿ ಇಳಿಯದೆ ಗಿಬೆಯದ ಮಟ್ಟಿಗೂ ಹಾದು ಹೋಗೋಣ ಅಂದನು.

13ಅವನು ಊಳಿಗದವನಿಗೆ--ಗಿಬೆಯದಲ್ಲಾದರೂ ರಾಮದಲ್ಲಾದರೂ ಇಳುಕೊಳ್ಳುವದಕ್ಕೆ ಆ ಸ್ಥಳಗಳಲ್ಲಿ ಒಂದಕ್ಕೆ ಸೇರೋಣ ಬಾ ಅಂದನು.

14ಹಾಗೆಯೇ ಅವರು ದಾಟಿಹೋದರು. ಅವರು ಬೆನ್ಯಾವಿಾನನಿಗೆ ಸೇರಿದ ಗಿಬೆಯ ಬಳಿಗೆ ಬರುವಾಗ ಸೂರ್ಯ ಮುಳು ಗಿತು.

15ಆದದರಿಂದ ಅವರು ಗಿಬೆಯದಲ್ಲಿ ಇಳಿಯು ವದಕ್ಕೆ ಪ್ರವೇಶಿಸುವ ಹಾಗೆ ಅಲ್ಲಿಗೆ ತಿರುಗಿಕೊಂಡರು. ಅವನು ಪ್ರವೇಶಿಸಿದಾಗ ಮನೆಯಲ್ಲಿ ಇಳುಕೊಳ್ಳು ವದಕ್ಕೆ ಅವರನ್ನು ಯಾರೂ ಸೇರಿಸಿಕೊಳ್ಳದ್ದರಿಂದ ಅವನು ಆ ಪಟ್ಟಣದ ಬೀದಿಯಲ್ಲಿ ಕುಳಿತಿದ್ದನು.

16ಆಗ ಇಗೋ, ಒಬ್ಬ ಮುದುಕನು ತನ್ನ ಹೊಲದ ಕೆಲಸದಿಂದ ಸಂಜೆಯಲ್ಲಿ ಬಂದನು. ಆ ಮನುಷ್ಯನು ಎಫ್ರಾಯಾಮ್‌ ಬೆಟ್ಟದವನಾಗಿಯೂ ಗಿಬೆಯದಲ್ಲಿ ಪ್ರವಾಸಿಯಾಗಿಯೂ ಇದ್ದನು. ಆದರೆ ಅಲ್ಲಿರುವ ಜನರು ಬೆನ್ಯಾವಿಾನ್ಯರಾಗಿದ್ದರು.

ನ್ಯಾಯಸ್ಥಾಪಕರು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी