ಆದಿಕಾಂಡ 42:5

ಕಾನಾನ್‌ ದೇಶದಲ್ಲಿ ಬರವಿದ್ದದರಿಂದ ಧಾನ್ಯ ವನ್ನು ಕೊಂಡುಕೊಳ್ಳುವದಕ್ಕಾಗಿ ಬರುವವರೊಂದಿಗೆ ಇಸ್ರಾಯೇಲನ ಕುಮಾರರು ಬಂದರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 42

3ಆಗ ಯೋಸೇಫನ ಹತ್ತು ಮಂದಿ ಸಹೋದರರು ಐಗುಪ್ತದಲ್ಲಿ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಇಳಿದು ಹೋದರು.

4ಆದರೆ ಯಾಕೋಬನು ಯೋಸೆಫನ ತಮ್ಮನಾದ ಬೆನ್ಯಾವಿಾನ ನಿಗೆ ಕೇಡುಬಂದೀತು ಎಂದು ಹೇಳಿ ಅಣ್ಣಂದಿರ ಸಂಗಡ ಅವನನ್ನು ಕಳುಹಿಸಲಿಲ್ಲ.

5ಕಾನಾನ್‌ ದೇಶದಲ್ಲಿ ಬರವಿದ್ದದರಿಂದ ಧಾನ್ಯ ವನ್ನು ಕೊಂಡುಕೊಳ್ಳುವದಕ್ಕಾಗಿ ಬರುವವರೊಂದಿಗೆ ಇಸ್ರಾಯೇಲನ ಕುಮಾರರು ಬಂದರು.

6ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾ ಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರು ವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.

7ಯೋಸೇ ಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದಾಗ್ಯೂ ತಿಳಿಯದವನ ಹಾಗೆ ಅನ್ಯನಂತೆ ಕಠಿಣವಾದ ಮಾತುಗಳನ್ನಾಡಿ ಅವರಿಗೆ--ಎಲ್ಲಿಂದ ಬಂದಿರಿ ಅಂದನು. ಅದಕ್ಕೆ ಅವರು--ಆಹಾರ ಕೊಂಡುಕೊಳ್ಳುವದಕ್ಕೆ ಕಾನಾನ್‌ ದೇಶದಿಂದ ಬಂದೆವು ಅಂದರು.

ಆದಿಕಾಂಡ 42 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी