ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲ ದ್ದಾಗಿದ್ದರೆ ಎರಡನೆಯದಕ್ಕೆ ಅವಕಾಶವು ಇರುತ್ತಿರಲಿಲ್ಲ.
5ಅವರು ಪರಲೋಕದಲ್ಲಿರುವವಗಳ ನಿದರ್ಶನವೂ ಛಾಯೆಯೂ ಆಗಿರುವದರಲ್ಲಿ (ಆಲಯ ದಲ್ಲಿ) ಸೇವೆಯನ್ನು ನಡಿಸುವವರು. ಮೋಶೆಯು ದೇವರಿಂದ ಎಚ್ಚರಿಸಲ್ಪಟ್ಟು ಗುಡಾರವನ್ನು ಮಾಡುವದ ಕ್ಕಿದ್ದಾಗ--ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇ
6ಆದರೆ ಆತನು ಅದಕ್ಕಿಂತ ಶ್ರೇಷ್ಠವಾದ ಸೇವೆಯನ್ನು ಹೊಂದಿದ ವನಾಗಿದ್ದಾನೆ; ಉತ್ತಮವಾದ ವಾಗ್ದಾನಗಳ ಮೇಲೆ ಸ್ಥಾಪಿತವಾದ ಶ್ರೇಷ್ಠವಾದ ಒಡಂಬಡಿಕೆಗೆ ಸಹ ಮಧ್ಯಸ್ಥನಾಗಿದ್ದಾನೆ.
7ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲ ದ್ದಾಗಿದ್ದರೆ ಎರಡನೆಯದಕ್ಕೆ ಅವಕಾಶವು ಇರುತ್ತಿರಲಿಲ್ಲ.
8ಆತನು ಆದರ ಮೇಲೆ ತಪ್ಪುಹೊರಿಸಿ ಹೀಗೆಂ ದನು--ಇಗೋ, ನಾನು ಇಸ್ರಾಯೇಲ್ ಮನೆತನ ದೊಂದಿಗೂ ಯೆಹೂದ ಮನೆತನದೊಂದಿಗೂ ಹೊಸ ದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿ ಕೊಳ್ಳುವ ದಿನಗಳು ಬರುವವು.
9ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶ ದೊಳಗಿಂದ ಕರಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾ ದದರಿಂದ ನಾನು ಅವರನ್ನು ಲಕ್ಷ್ಯಕ್ಕೆ ತರಲಿಲ್ಲ ಎಂದು ಕರ್ತನು ಹೇಳುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ