ಯೆರೆಮಿಯ 37:12

ಯೆರೆವಿಾಯನು ಬೆನ್ಯಾವಿಾನನ ದೇಶಕ್ಕೆ ಹೋಗು ವದಕ್ಕೂ ಜನರ ಮಧ್ಯದಿಂದ ತನ್ನ ಪಾಲನ್ನು ತಕ್ಕೊಳ್ಳು ವದಕ್ಕೂ ಯೆರೂಸಲೇಮಿನಿಂದ ಹೊರಟನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 37

10ನಿಮ್ಮ ಸಂಗಡ ಯುದ್ಧ ಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿ ದ್ದಾಗ್ಯೂ ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.

11ಕಸ್ದೀಯರ ದಂಡು ಫರೋಹನ ದಂಡಿನ ಭಯದ ನಿಮಿತ್ತ ಯೆರೂಸಲೇಮನ್ನು ಬಿಟ್ಟು ಹೋದಮೇಲೆ

12ಯೆರೆವಿಾಯನು ಬೆನ್ಯಾವಿಾನನ ದೇಶಕ್ಕೆ ಹೋಗು ವದಕ್ಕೂ ಜನರ ಮಧ್ಯದಿಂದ ತನ್ನ ಪಾಲನ್ನು ತಕ್ಕೊಳ್ಳು ವದಕ್ಕೂ ಯೆರೂಸಲೇಮಿನಿಂದ ಹೊರಟನು.

13ಆಗ ಅವನು ಬೆನ್ಯಾವಿಾನನ ಬಾಗಲಲ್ಲಿ ಇರುವಾಗ ಅಲ್ಲಿ ಹೆನನ್ಯನ ಮಗನಾದ ಶೆಲೆಮ್ಯನ ಮಗನಾದ ಇರೀಯ ನೆಂಬ ಪಹರೆಯ ನಾಯಕನು ಇದ್ದನು; ಇವನು ಪ್ರವಾದಿಯಾದ ಯೆರೆವಿಾಯನನ್ನು--ನೀನು ಕಸ್ದೀ ಯರ ಕಡೆಗೆ ಬೀಳುತ್ತಿ ಎಂದು ಹೇಳಿ ಹಿಡಿದನು.

14ಆದರೆ ಯೆರೆವಿಾಯನು ಹೇಳಿದ್ದೇನಂದರೆ--ಸುಳ್ಳು; ನಾನು ಕಸ್ದೀಯರ ಕಡೆಗೆ ಬೀಳುವವನಲ್ಲ ಅಂದನು. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆವಿಾ ಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು.

ಯೆರೆಮಿಯ 37 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी