ನ್ಯಾಯಸ್ಥಾಪಕರು 4:15

ಕರ್ತನು ಸೀಸೆರನನ್ನೂ ಅವನ ಎಲ್ಲಾ ರಥಗಳನ್ನೂ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಕತ್ತಿಯಿಂದ ಚದರಿಸಿದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 4

13ಆದದರಿಂದ ಸೀಸೆರನು ಒಂಭೈನೂರು ಕಬ್ಬಿಣದ ರಥಗಳಾದ ತನ್ನ ಎಲ್ಲಾ ರಥಗಳನ್ನೂ ತನ್ನ ಸಂಗಡ ಇರುವ ಎಲ್ಲಾ ಜನವನ್ನೂ ಅನ್ಯಜನಾಂಗಗಳ ಹರೋಷೆತಿನಿಂದ ಕೀಷೋನ್‌ ನದಿಗೆ ಬರಮಾಡಿ ದನು.

14ದೆಬೋರಳು ಬಾರಾಕನಿಗೆ--ನೀನು ಏಳು; ಕರ್ತನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸಿಕೊಡುವ ದಿನವು ಇದೇ; ಕರ್ತನು ನಿನ್ನ ಮುಂದೆ ಹೊರಡಲಿಲ್ಲವೋ ಅಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು ತಾಬೋರ್‌ ಬೆಟ್ಟ ದಿಂದ ಇಳಿದನು.

15ಕರ್ತನು ಸೀಸೆರನನ್ನೂ ಅವನ ಎಲ್ಲಾ ರಥಗಳನ್ನೂ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಕತ್ತಿಯಿಂದ ಚದರಿಸಿದನು.

16ಆಗ ಸೀಸೆರನು ರಥವನ್ನು ಬಿಟ್ಟು ಇಳಿದು ಕಾಲು ನಡೆಯಾಗಿ ಓಡಿ ಹೋದನು. ಆದರೆ ಬಾರಾಕನು ರಥಗಳನ್ನೂ ಸೈನ್ಯ ವನ್ನೂ ಅನ್ಯಜನಾಂಗಗಳ ಹರೋಷೆತಿನ ಮಟ್ಟಿಗೂ ಹಿಂದಟ್ಟಿದನು. ಸೀಸೆರನ ಸೈನ್ಯವೆಲ್ಲಾ ಕತ್ತಿಯಿಂದ ಹತ ವಾಗಿ ಬಿತ್ತು; ಒಬ್ಬನಾದರೂ ಉಳಿಯಲಿಲ್ಲ.

17ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಯಾಬೀನನೆಂಬ ಹಾಚೋರಿನ ಅರಸ ನಿಗೂ ಕೇನ್ಯನಾದ ಹೆಬೆರನ ಮನೆಗೂ ನಡುವೆ ಸಮಾ ಧಾನ ಇತ್ತು.

ನ್ಯಾಯಸ್ಥಾಪಕರು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी