೧ ಸಮುವೇಲನು 28:2

ದಾವೀದನು ಆಕೀಷನಿಗೆ--ನಿಶ್ಚಯವಾಗಿ ನಿನ್ನ ದಾಸನು ಮಾಡುವದನ್ನು ತಿಳುಕೊಳ್ಳುವಿ ಅಂದನು. ಆಕೀಷನು ದಾವೀದನಿಗೆ--ಎಂದೆಂದಿಗೂ ನಾನು ನಿನ್ನನ್ನು ತಲೆಗಾವಲಿಯವನಾಗಿರಲು ಮಾಡುವೆನು ಅಂದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 28

1ಆ ದಿವಸಗಳಲ್ಲಿ ಏನಾಯಿತಂದರೆ,ಫಿಲಿಷ್ಟಿಯರು ಇಸ್ರಾಯೇಲ್ಯರ ಮೇಲೆ ಯುದ್ಧಮಾಡಲು ತಮ್ಮ ಸೈನ್ಯವನ್ನು ಕೂಡಿಸಿ ಕೊಂಡರು. ಆಗ ಆಕೀಷನು ದಾವೀದನಿಗೆ--ನೀನೂ ನಿನ್ನ ಜನರೂ ಯುದ್ಧವನ್ನು ಮಾಡಲು ನಮ್ಮ ಸಂಗಡ ನಿಶ್ಚಯವಾಗಿ ಬರಬೇಕೆಂದು ತಿಳಿಯಲಿಲ್ಲವೋ ಅಂದನು.

2ದಾವೀದನು ಆಕೀಷನಿಗೆ--ನಿಶ್ಚಯವಾಗಿ ನಿನ್ನ ದಾಸನು ಮಾಡುವದನ್ನು ತಿಳುಕೊಳ್ಳುವಿ ಅಂದನು. ಆಕೀಷನು ದಾವೀದನಿಗೆ--ಎಂದೆಂದಿಗೂ ನಾನು ನಿನ್ನನ್ನು ತಲೆಗಾವಲಿಯವನಾಗಿರಲು ಮಾಡುವೆನು ಅಂದನು.

3ಸಮುವೇಲನು ಸತ್ತು ಹೋಗಿದ್ದನು; ಇಸ್ರಾಯೇ ಲ್ಯರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಸ್ವಂತ ಪಟ್ಟಣವಾದ ರಾಮದಲ್ಲಿ ಅವನನ್ನು ಹೂಣಿಟ್ಟಿದ್ದರು. ಇದಲ್ಲದೆ ಸೌಲನು ಯಕ್ಷಿಣಿಗಾರರನ್ನೂ ಮಂತ್ರವಾದಿ ಗಳನ್ನೂ ದೇಶದಲ್ಲಿಂದ ಹೊರಡಿಸಿದ್ದನು.

4ಆಗ ಫಿಲಿಷ್ಟಿ ಯರು ಕೂಡಿಕೊಂಡು ಬಂದು ಶೂನೇಮಿನಲ್ಲಿ ದಂಡಿ ಳಿದರು. ಸೌಲನು ಎಲ್ಲಾ ಇಸ್ರಾಯೇಲ್ಯರನ್ನು ಕೂಡಿಸಿ ಕೊಂಡು ಗಿಲ್ಬೋವದಲ್ಲಿ ದಂಡಿಳಿದನು.

೧ ಸಮುವೇಲನು 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी