ನೀನು ನಿನ್ನ ಜನರಾದ ಇಸ್ರಾಯೇಲ್ಯರನ್ನು ಯುಗಯುಗಾಂತರಕ್ಕೂ ನಿನ್ನ ಸ್ವಂತ ಜನರಾಗಿ ಮಾಡಿದಿ; ನೀನು ಕರ್ತನೇ, ಅವರ ದೇವರಾದಿ.
20ಓ ಕರ್ತನೇ, ನಾವು ನಮ್ಮ ಕಿವಿಗಳಿಂದ ಕೇಳಿದ ಎಲ್ಲಾದರ ಪ್ರಕಾರ ನಿನ್ನ ಹಾಗೆ ಯಾರೂ ಇಲ್ಲ; ನಿನ್ನ ಹೊರತು ದೇವರು ಯಾರೂ ಇಲ್ಲ.
21ನಿನ್ನ ಜನರಾದ ಇಸ್ರಾಯೇಲ್ಯರ ಹಾಗೆ ಭೂಮಿ ಯಲ್ಲಿರುವ ಜನಗಳೊಳಗೆ ಜನಾಂಗವು ಯಾವದು? ಐಗುಪ್ತದಿಂದ ಬಿಡಿಸಿದ ನಿನ್ನ ಜನರ ಮುಂದೆ ಜನಾಂಗ ಗಳನ್ನು ಓಡಿಸಿ ನಿನಗೆ ದೊಡ್ಡದಾದಂಥ ಭಯಂಕರ ವಾದಂಥ ನಾಮವನ್ನು ಉಂಟು ಮಾಡಲು ದೇವರಾದ ನೀನು ನಿನ್ನ ಸ್ವಂತ ಜನರಾದ ಅವರನ್ನು ಬಿಡಿಸಲು ಹೋದಿ.
22ನೀನು ನಿನ್ನ ಜನರಾದ ಇಸ್ರಾಯೇಲ್ಯರನ್ನು ಯುಗಯುಗಾಂತರಕ್ಕೂ ನಿನ್ನ ಸ್ವಂತ ಜನರಾಗಿ ಮಾಡಿದಿ; ನೀನು ಕರ್ತನೇ, ಅವರ ದೇವರಾದಿ.
23ಈಗ ಕರ್ತನೇ, ನೀನು ನಿನ್ನ ಸೇವಕನನ್ನು ಕುರಿತು ಅವನ ಮನೆಯನ್ನು ಕುರಿತು ಹೇಳಿದ ಮಾತು ಯುಗಯುಗಾಂತರಕ್ಕೂ ನಿಶ್ಚಯವಾಗಲಿ; ನೀನು ಹೇಳಿದ ಹಾಗೆ ಮಾಡು.
24ಅದು ನಿಶ್ಚಯವಾಗಲಿ; ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಇಸ್ರಾಯೇಲಿಗೆ ದೇವರಾಗಿದ್ದಾ ನೆಂದು ನಿನ್ನ ನಾಮವು ಯುಗಯುಗಾಂತರಕ್ಕೂ ಘನ ಹೊಂದಲಿ;
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ