ವಿಮೋಚನಕಾಂಡ 14:20

ಅದು ಐಗುಪ್ತ್ಯರ ದಂಡಿಗೂ ಇಸ್ರಾಯೇಲ್ಯರ ದಂಡಿಗೂ ನಡುವೆ ಬಂದಿತು. ಅದು ಅವರಿಗೆ ಮೇಘವೂ ಕತ್ತಲೂ ಆಗಿದ್ದು ಇಸ್ರಾಯೇಲ್ಯರಿಗೆ ರಾತ್ರಿ ಯಲ್ಲಿ ಬೆಳಕು ಕೊಡುವಂಥದ್ದಾಗಿದ್ದದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಿಲ್ಲ.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 14

18ನಾನು ಫರೋ ಹನ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿ ಕೊಂಡಾಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿದು ಕೊಳ್ಳುವರು ಅಂದನು.

19ಆಗ ಇಸ್ರಾಯೇಲ್‌ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.

20ಅದು ಐಗುಪ್ತ್ಯರ ದಂಡಿಗೂ ಇಸ್ರಾಯೇಲ್ಯರ ದಂಡಿಗೂ ನಡುವೆ ಬಂದಿತು. ಅದು ಅವರಿಗೆ ಮೇಘವೂ ಕತ್ತಲೂ ಆಗಿದ್ದು ಇಸ್ರಾಯೇಲ್ಯರಿಗೆ ರಾತ್ರಿ ಯಲ್ಲಿ ಬೆಳಕು ಕೊಡುವಂಥದ್ದಾಗಿದ್ದದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಿಲ್ಲ.

21ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು.

22ಹೀಗೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.

ವಿಮೋಚನಕಾಂಡ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी