ಯೆರೆಮಿಯ 38:2

ಕರ್ತನು ಹೀಗೆ ಹೇಳುತ್ತಾನೆ--ಈ ಪಟ್ಟಣದಲ್ಲಿ ನಿಲ್ಲುವವನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಸಾಯುವನು; ಆದರೆ ಕಸ್ದೀಯರ ಬಳಿಗೆ ಹೊರಗೆ ಹೋಗುವವನು ಬದುಕುವನು; ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು;

ಸಂದರ್ಭದೊಂದಿಗೆ ಓದಿ · ಯೆರೆಮಿಯ 38

1ಮತ್ತಾನನ ಮಗನಾದ ಶೆಫತ್ಯನೂ ಷಷ್ಹೂರನ ಮಗನಾದ ಗೆದಲ್ಯನೂ ಸೆಲ್ಯೆಮನ ಮಗನಾದ ಯೂಕಲನೂ ಮಲ್ಕೀಯನ ಮಗನಾದ ಪಷ್ಹೂರನೂ ಯೆರೆವಿಾಯನು ಜನರೆಲ್ಲರಿಗೆ ಹೇಳಿದ ಮಾತುಗಳನ್ನು ಕೇಳಿದರು; ಅವು ಯಾವವೆಂದರೆ--

2ಕರ್ತನು ಹೀಗೆ ಹೇಳುತ್ತಾನೆ--ಈ ಪಟ್ಟಣದಲ್ಲಿ ನಿಲ್ಲುವವನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಸಾಯುವನು; ಆದರೆ ಕಸ್ದೀಯರ ಬಳಿಗೆ ಹೊರಗೆ ಹೋಗುವವನು ಬದುಕುವನು; ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು;

3ಅವನು ಬದುಕುವನು. ಕರ್ತನು ಹೇಳುವದೇನಂದರೆ--ಈ ಪಟ್ಟಣವು ನಿಶ್ಚಯವಾಗಿ ಬಾಬೆಲ್‌ ಅರಸನ ಸೈನ್ಯದ ಕೈಯಲ್ಲಿ ಒಪ್ಪಿಸಲ್ಪಡುವದು; ಅದು ಅದನ್ನು ವಶಮಾಡಿ ಕೊಳ್ಳುವದು.

4ಆದದರಿಂದ ಆ ಪ್ರಧಾನರು ಅರಸನಿಗೆ --ಈ ಮನುಷ್ಯನು ಸಾಯಲಿ; ಯಾಕಂದರೆ ಇವನು ಇಂಥಾ ಮಾತುಗಳನ್ನು ಅವರ ಸಂಗಡ ಆಡಿ ಈ ಪಟ್ಟಣದಲ್ಲಿ ಉಳಿದ ಎಲ್ಲಾ ಯುದ್ಧಸ್ಥರ ಕೈಗಳನ್ನೂ ಎಲ್ಲಾ ಜನರ ಕೈಗಳನ್ನೂ ಬಲಹೀನ ಮಾಡುತ್ತಾನೆ; ಈ ಮನುಷ್ಯನು ಜನರ ಕ್ಷೇಮವನ್ನಲ್ಲ ಅವರ ಕೇಡನ್ನು ಹುಡುಕುತ್ತಾನೆಂದು ಹೇಳಿದನು.

ಯೆರೆಮಿಯ 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी