ಜೆಕರ್ಯ 8:4

ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ಮುದುಕರೂ ಮುದುಕಿಯರೂ ವಾಸವಾಗಿರುವರು; ಕೇವಲ ವೃದ್ಧಾಪ್ಯದಿಂದ ಒಬ್ಬೊಬ್ಬನ ಕೈಯಲ್ಲಿ ಅವನವನ ಕೋಲು ಇರುವದು.

ಸಂದರ್ಭದೊಂದಿಗೆ ಓದಿ · ಜೆಕರ್ಯ 8

2ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೆನು; ಅತಿ ಉಗ್ರದಿಂದ ಅದರ ವಿಷಯದಲ್ಲಿ ರೋಷವುಳ್ಳವನಾಗಿದ್ದೆನು.

3ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು.

4ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ಮುದುಕರೂ ಮುದುಕಿಯರೂ ವಾಸವಾಗಿರುವರು; ಕೇವಲ ವೃದ್ಧಾಪ್ಯದಿಂದ ಒಬ್ಬೊಬ್ಬನ ಕೈಯಲ್ಲಿ ಅವನವನ ಕೋಲು ಇರುವದು.

5ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವವು.

6ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇದು ಈ ದಿವಸಗಳಲ್ಲಿ ಉಳಿದ ಈ ಜನರ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರಿ ದರೂ ಅದು ನನ್ನ ಕಣ್ಣುಗಳಿಗೂ ಸಹ ಆಶ್ಚರ್ಯವಾಗಿ ತೋರುವದೋ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.

ಜೆಕರ್ಯ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी