ಆಗ ನಾನು ಗುರಿ ಇಟ್ಟವನ ಹಾಗೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆಯುವೆನು.
18ಯೋನಾತಾನನು ದಾವೀದನಿಗೆ--ನಾಳೆ ಅಮಾ ವಾಸ್ಯೆ; ನೀನು ಅಲ್ಲಿ ಇಲ್ಲದಿರುವದರಿಂದ ನಿನ್ನ ಸ್ಥಳವು ಬರಿದಾಗಿರುವದು.
19ನೀನು ಮೂರು ದಿವಸ ತಡೆದ ತರುವಾಯ ಕೆಲಸವು ನಡೆಯುತ್ತಿರುವಾಗ ನೀನು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ತ್ವರೆಯಾಗಿ ತಿರಿಗಿ ಬಂದು ಏಜಲ್ ಎಂಬ ಕಲ್ಲಿನ ಬಳಿಯಲ್ಲಿ ಕುಳಿತಿರು.
20ಆಗ ನಾನು ಗುರಿ ಇಟ್ಟವನ ಹಾಗೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆಯುವೆನು.
21ಇಗೋ, ಹುಡುಗ ನನ್ನು ಕಳುಹಿಸಿ--ಆ ಬಾಣಗಳನ್ನು ಹುಡುಕಿಕೊಂಡು ಬಾ ಎಂದು ಹೇಳುವೆನು. ಇಗೋ, ಆ ಬಾಣಗಳು ಈಚೆ ಬಿದ್ದಿರುತ್ತವೆ; ಅವುಗಳನ್ನು ತೆಗೆದುಕೊಂಡು ಬಾ ಎಂದು ನಾನು ಹುಡುಗನಿಗೆ ಹೇಳಿದರೆ ನೀನು ಬರ ಬಹುದು. ಯಾಕಂದರೆ ಕರ್ತನಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವದು.
22ಆದರೆ--ಇಗೋ, ಬಾಣ ಗಳು ಆಚೆ ಬಿದ್ದಿರುತ್ತವೆ ಎಂದು ಹುಡುಗನಿಗೆ ಹೇಳಿದರೆ ಹೊರಟುಹೋಗು; ಯಾಕಂದರೆ ಕರ್ತನು ನಿನ್ನನ್ನು ಕಳುಹಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ