ಆದರೆ ವ್ಯಾಧಿ ಯಿಂದ ಸತ್ತವರು ಇಪ್ಪತ್ತುನಾಲ್ಕು ಸಾವಿರ ಮಂದಿಯಾಗಿದ್ದರು.
7ಆರೋನನ ಮಗನಾಗಿದ್ದ ಎಲೀಯಾಜರನ ಮಗನಾದ ಫೀನೆಹಾಸನೆಂಬ ಯಾಜಕನು ಅದನ್ನು ನೋಡಿ ಸಭೆಯ ಮಧ್ಯದಿಂದ ಎದ್ದು ತನ್ನ ಕೈಯಲ್ಲಿ ಭಲ್ಲೆಯನ್ನು ಹಿಡುಕೊಂಡು
8ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.
9ಆದರೆ ವ್ಯಾಧಿ ಯಿಂದ ಸತ್ತವರು ಇಪ್ಪತ್ತುನಾಲ್ಕು ಸಾವಿರ ಮಂದಿಯಾಗಿದ್ದರು.
10ಆಗ ಕರ್ತನು ಮೋಶೆಗೆ--
11ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನಾದ ಯಾಜಕ ನಾಗಿರುವ ಫೀನೆಹಾಸನು ಇಸ್ರಾಯೇಲಿನ ಮಕ್ಕಳಲ್ಲಿ ನನಗೋಸ್ಕರ ಆಸಕ್ತನಾಗಿದ್ದು ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿ ಬಿಟ್ಟಿದ್ದಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ