೨ ಅರಸುಗಳು 4:33

ಅವನು ಒಳಗೆ ಪ್ರವೇ ಶಿಸಿ ಯಾರೂ ಒಳಗೆ ಬಾರದಂತೆ ಆ ಕೋಣೆಯ ಬಾಗಲು ಮುಚ್ಚಿಕೊಂಡು ಕರ್ತನನ್ನು ಪ್ರಾರ್ಥಿಸಿದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 4

31ಆಗ ಅವನೆದ್ದು ಅವಳ ಹಿಂದೆ ಹೋದನು. ಗೇಹಜಿಯು ಅವರಿಗೆ ಮುಂದಾಗಿ ಹೋಗಿ ಆ ಕೋಲನ್ನು ಹುಡುಗನ ಮುಖದ ಮೇಲೆ ಇಟ್ಟನು. ಆದರೆ ಶಬ್ದವಾದರೂ ಆಲೈಸುವದಾದರೂ ಇಲ್ಲದೆ ಇತ್ತು. ಆದದರಿಂದ ಅವನು ಎದುರುಗೊಳ್ಳಲು ತಿರಿಗಿ ಹೋಗಿ ಎಲೀಷನಿಗೆ--ಹುಡುಗನು ಎಚ್ಚರವಾಗ ಲಿಲ್ಲ ಅಂದನು.

32ಎಲೀಷನು ಮನೆಯಲ್ಲಿ ಬಂದಾಗ ಇಗೋ, ಆ ಹುಡುಗನು ಸತ್ತವನಾಗಿದ್ದು ತನ್ನ ಮಂಚದ ಮೇಲೆ ಮಲಗಿಸಲ್ಪಟ್ಟಿದ್ದನು.

33ಅವನು ಒಳಗೆ ಪ್ರವೇ ಶಿಸಿ ಯಾರೂ ಒಳಗೆ ಬಾರದಂತೆ ಆ ಕೋಣೆಯ ಬಾಗಲು ಮುಚ್ಚಿಕೊಂಡು ಕರ್ತನನ್ನು ಪ್ರಾರ್ಥಿಸಿದನು.

34ಅವನು ಏರಿಹೋಗಿ ಮಗುವಿನ ಮೇಲೆ ಮಲಗಿ ಕೊಂಡು ತನ್ನ ಬಾಯಿಯನ್ನು ಅವನ ಬಾಯಿಯ ಮೇಲೆಯೂ ತನ್ನ ಕಣ್ಣುಗಳನ್ನು ಅವನ ಕಣ್ಣುಗಳ ಮೇಲೆಯೂ ತನ್ನ ಕೈಗಳನ್ನು ಅವನ ಕೈಗಳ ಮೇಲೆಯೂ ಇರಿಸಿದನು. ಅವನು ಮೇಲೆ ಬೋರ್ಲಬಿದ್ದದರಿಂದ ಮಗುವಿನ ಶರೀರವು ಬೆಚ್ಚಗೆ ಆಯಿತು.

35ಆಗ ಅವನು ತಿರುಗಿ ಬಂದು ಮನೆಯಲ್ಲಿ ಸ್ವಲ್ಪಹೊತ್ತು ಅತ್ತಿತ್ತ ತಿರುಗಾಡಿ ಏರಿಹೋಗಿ ಅವನ ಮೇಲೆ ಬೋರ್ಲ ಬಿದ್ದನು. ಆಗ ಆ ಹುಡುಗನು ಏಳು ಸಾರಿ ಸೀತು ತರುವಾಯ ತನ್ನ ಕಣ್ಣುಗಳನ್ನು ತೆರೆದನು.

೨ ಅರಸುಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी