ಯೆಶಾಯ 16:8

ಹೆಷ್ಬೋನಿನ ಹೊಲ ಗಳೂ, ಸಿಬ್ಮದ ದ್ರಾಕ್ಷೆಯೂ ನಿಸ್ಸಾರವಾಗಿವೆ; ಅನ್ಯ ಜನಗಳ ಪ್ರಭುಗಳು ಅದರ ಮುಖ್ಯವಾದ ಗಿಡಗಳನ್ನು ಮುರಿದುಹಾಕಿದ್ದಾರೆ; ಅವರು ಯಜ್ಜೇರಿನ ವರೆಗೂ ಬಂದರು; ಅಡವಿಯಲ್ಲಿ ಅವರು ಸಂಚರಿಸಿದರು. ಅವಳ ಕೊಂಬೆಗಳು ಚಾಚಲ್ಪಟ್ಟವು ಅವರು ಸಮುದ್ರದ ಮೇಲೆ ಹೋದರು.

ಸಂದರ್ಭದೊಂದಿಗೆ ಓದಿ · ಯೆಶಾಯ 16

6ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ; ಅವನಿಗೆ ಬಹಳ ಗರ್ವವುಂಟು, ಅಹಂಕಾರವು, ಗರ್ವ ವು ಕೋಪವು ಸಹ ಉಂಟು; ಆದರೆ ಅವನು ಕೊಚ್ಚಿ ಕೊಳ್ಳುವದು ವ್ಯರ್ಥ.

7ಆದದರಿಂದ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವದು, ಪ್ರತಿಯೊ ಬ್ಬನೂ ಗೋಳಾಡುವನು; ಕೀರ್‌ ಹರೆಷೆಥಿನ ಅಸ್ತಿವಾರ ಗಳಿಗೋಸ್ಕರ ನೀವು ದುಃಖಿಸುವಿರಿ; ನಿಜವಾಗಿಯೂ ಅವರು ನೊಂದುಹೋಗಿದ್ದಾರೆ.

8ಹೆಷ್ಬೋನಿನ ಹೊಲ ಗಳೂ, ಸಿಬ್ಮದ ದ್ರಾಕ್ಷೆಯೂ ನಿಸ್ಸಾರವಾಗಿವೆ; ಅನ್ಯ ಜನಗಳ ಪ್ರಭುಗಳು ಅದರ ಮುಖ್ಯವಾದ ಗಿಡಗಳನ್ನು ಮುರಿದುಹಾಕಿದ್ದಾರೆ; ಅವರು ಯಜ್ಜೇರಿನ ವರೆಗೂ ಬಂದರು; ಅಡವಿಯಲ್ಲಿ ಅವರು ಸಂಚರಿಸಿದರು. ಅವಳ ಕೊಂಬೆಗಳು ಚಾಚಲ್ಪಟ್ಟವು ಅವರು ಸಮುದ್ರದ ಮೇಲೆ ಹೋದರು.

9ಆದಕಾರಣ ಸಿಬ್ಮದ ದ್ರಾಕ್ಷಾ ಲತೆಯ ನಿಮಿತ್ತ ಯಜ್ಜೇರಿನೊಂದಿಗೆ ಅಳುವೆನು; ಓ ಹೆಷ್ಬೋನೇ, ಎಲೆಯಾಲೇ, ನಿನ್ನನ್ನು ನನ್ನ ಕಣ್ಣೀರಿ ನಿಂದ ತೋಯಿಸುವೆನು; ಬಿದ್ದುಹೋದ ನಿನ್ನ ಬೇಸಿ ಗೆಯ ಫಲಗಳಿಗೂ ಬೆಳೆಗಳಿಗೂ ಆರ್ಭಟಿಸುವರು.

10ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೆಗೆಯಲ್ಪಡುವವು; ದ್ರಾಕ್ಷೇತೋಟಗ ಳಲ್ಲಿ ಕೀರ್ತನೆಗಳಾಗಲಿ ಆರ್ಭಟವಾಗಲಿ ಇರುವದಿಲ್ಲ; ದ್ರಾಕ್ಷೇತೋಟಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವದಿಲ್ಲ; ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿ ದ್ದೇನೆ.

ಯೆಶಾಯ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी