೨ ಸಮುವೇಲನು 1:23

ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 1

21ಗಿಲ್ಬೋವ ಬೆಟ್ಟಗಳೇ, ನಿಮ್ಮ ಮೇಲೆ ಮಂಜೂ ಮಳೆಯೂ ಅರ್ಪಣೆಗಳ ಹೊಲ ಗಳೂ ಇಲ್ಲದೆ ಹೋಗಲಿ. ಯಾಕಂದರೆ ಅಲ್ಲಿ ಪರಾ ಕ್ರಮಶಾಲಿಗಳ ಗುರಾಣಿಯೂ ಸೌಲನ ಗುರಾಣಿಯೂ ಅವಮಾನವಾಗಿ ಬಿದ್ದವು. ಸೌಲನು ಎಣ್ಣೆಯಿಂದ ಅಭಿಷೇಕಿಸಲ್ಪಡದವನ ಹಾಗಾದನು.

22ಕೊಲ್ಲಲ್ಪಟ್ಟ ವರ ರಕ್ತದಿಂದಲೂ ಬಲಶಾಲಿಗಳ ಕೊಬ್ಬಿನಿಂದಲೂ ಯೋನಾತಾನನ ಬಿಲ್ಲು ಹಿಂದಕ್ಕೆ ತಿರುಗಲಿಲ್ಲ; ಸೌಲನ ಕತ್ತಿ ಬರಿದಾಗಿ ತಿರಿಗಿ ಬರಲಿಲ್ಲ.

23ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.

24ಇಸ್ರಾಯೇಲಿನ ಕುಮಾರ್ತೆ ಯರೇ, ಸೌಲನಿಗೋಸ್ಕರ ಅಳಿರಿ, ನಿಮಗೆ ರಕ್ತಾಂಬರ ವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ; ನಿಮ್ಮ ಉಡುಗೆ ಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.

25ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ! ಯೋನಾತಾನನೇ, ನೀನು ನಿನ್ನ ಉನ್ನತಸ್ಥಳಗಳಲ್ಲಿ ಕೊಲ್ಲಲ್ಪಟ್ಟಿ.

೨ ಸಮುವೇಲನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी