೧ ಸಮುವೇಲನು 15:31

ಹಾಗೆಯೇ ಸಮುವೇಲನು ತಿರಿಗಿ ಸೌಲನ ಹಿಂದೆ ಹೋದನು; ಸೌಲನು ಕರ್ತನನ್ನು ಆರಾಧಿಸಿದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 15

29ಇಸ್ರಾ ಯೇಲಿನ ನಿತ್ಯ ಬಲವಾದಾತನು ಸುಳ್ಳು ಹೇಳುವಾತ ನಲ್ಲ, ಪಶ್ಚಾತ್ತಾಪಪಡುವಾತನೂ ಅಲ್ಲ. ಯಾಕಂದರೆ ಆತನು ಪಶ್ಚಾತ್ತಾಪಪಡುವಂತೆ ಮನುಷ್ಯನಲ್ಲ ಅಂದನು.

30ಅದಕ್ಕವನು--ನಾನು ಪಾಪವನ್ನು ಮಾಡಿದೆನು; ಆದರೆ ಈಗ ನೀನು ದಯಮಾಡಿ ನನ್ನ ಜನರ ಹಿರಿಯರ ಮುಂದೆಯೂ ಇಸ್ರಾಯೇಲ್ಯರ ಮುಂದೆಯೂ ನನ್ನನ್ನು ಗೌರವಿಸು ನಾನು ನಿನ್ನ ದೇವರಾದ ಕರ್ತನನ್ನು ಆರಾಧಿಸುವ ಹಾಗೆ ನೀನು ನನ್ನ ಸಂಗಡ ಹಿಂದಿರುಗಿ ಬಾ ಅಂದನು.

31ಹಾಗೆಯೇ ಸಮುವೇಲನು ತಿರಿಗಿ ಸೌಲನ ಹಿಂದೆ ಹೋದನು; ಸೌಲನು ಕರ್ತನನ್ನು ಆರಾಧಿಸಿದನು.

32ಸಮುವೇಲನು--ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ತನ್ನಿರಿ ಅಂದನು. ಅಗಾಗನು ಆನಂದವಾಗಿ ಅವನ ಬಳಿಗೆ ಹೋಗಿ--ನಿಶ್ಚಯವಾಗಿ ಮರಣದ ಕಹಿ ತಪ್ಪಿಹೋಯಿತೆಂದು ಅಂದು ಕೊಂಡನು.

33ಆದರೆ ಸಮುವೇಲನು ಅವನಿಗೆನಿನ್ನ ಕತ್ತಿಯು ಹೇಗೆ ಸ್ತ್ರೀಯರನ್ನು ಮಕ್ಕಳಿಲ್ಲದವರಾಗ ಮಾಡಿತೋ ಹಾಗೆಯೇ ಸ್ತ್ರೀಯರಲ್ಲಿ ನಿನ್ನ ತಾಯಿಯು ಮಕ್ಕಳಿಲ್ಲದವಳಾಗುವಳು ಎಂದು ಹೇಳಿ ಸಮುವೇಲನು ಗಿಲ್ಗಾಲಿನಲ್ಲಿ ಕರ್ತನ ಮುಂದೆ ಅಗಾಗನನ್ನು ತುಂಡು ತುಂಡಾಗಿ ಮಾಡಿಬಿಟ್ಟನು.

೧ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी