ಧರ್ಮೋಪದೇಶಕಾಂಡ 18:20

ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವದನ್ನು ನನ್ನ ಹೆಸರಿನಿಂದ ಮಾತನಾಡುವದಕ್ಕೆ ಅಹಂಕಾರ ತೋರಿ ಸುವ ಪ್ರವಾದಿಯೂ ಬೇರೆ ದೇವರುಗಳ ಹೆಸರಿ ನಿಂದ ಮಾತನಾಡುವವನೂ ಆದ ಆ ಪ್ರವಾದಿಯೂ ಸಾಯಬೇಕು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 18

18ನಿನ್ನ ಹಾಗಿರುವ ಪ್ರವಾದಿಯನ್ನು ಅವರ ಸಹೋದರರಲ್ಲಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಅವನ ಬಾಯಲ್ಲಿ ಇಡುವೆನು; ನಾನು ಅವನಿಗೆ ಆಜ್ಞಾಪಿಸುವದನ್ನೆಲ್ಲಾ ಅವನು ಅವರಿಗೆ ಹೇಳುವನು.

19ಅವನು ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.

20ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವದನ್ನು ನನ್ನ ಹೆಸರಿನಿಂದ ಮಾತನಾಡುವದಕ್ಕೆ ಅಹಂಕಾರ ತೋರಿ ಸುವ ಪ್ರವಾದಿಯೂ ಬೇರೆ ದೇವರುಗಳ ಹೆಸರಿ ನಿಂದ ಮಾತನಾಡುವವನೂ ಆದ ಆ ಪ್ರವಾದಿಯೂ ಸಾಯಬೇಕು.

21ಇದಲ್ಲದೆ ಕರ್ತನು ಹೇಳಿದ ವಾಕ್ಯವು ನಮಗೆ ಹೇಗೆ ತಿಳಿದೀತೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ

22ಪ್ರವಾದಿಯು ಕರ್ತನ ಹೆಸರಿನಲ್ಲಿ ಹೇಳಿದ ಮೇಲೆ ಆಗದೆ ಇಲ್ಲವೆ ಸಂಭವಿಸದೆ ಹೋದರೆ ಅದೇ ಕರ್ತನು ಹೇಳದಂಥ, ಮಾತನಾಡದಂಥ ಕಾರ್ಯವು; ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ ಅವನಿಗೆ ಭಯಪಡಬಾರದು.

ಧರ್ಮೋಪದೇಶಕಾಂಡ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी